Lucknow

ಪತ್ನಿಯ ಶಿರಚ್ಛೇದಿಸಿ ಠಾಣೆಗೆ ರುಂಡದೊಂದಿಗೆ ಶರಣಾದ

ಲಖನೌ, ೯- ಪತಿ-ಪತ್ನಿಯ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯ ಶಿರ ಕತ್ತರಿಸಿ ರುಂಡ ಕೈಯಲ್ಲಿ ಹಿಡಿದು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಉತ್ತರ ಪ್ರದೇಶದ ಬಾಂಡಾದಲ್ಲಿ ಈ ಘಟನೆ ನಡೆದಿದ್ದು, ಪತಿ ಚಿನ್ನಾರ ಎಂಬವ ತನ್ನ ಪತ್ನಿ ತಲೆ ಕಡಿದು ಕೈಯಲ್ಲಿ ಹಿಡಿದು ಠಾಣೆಗೆ ಬರುತ್ತಿರುವ ದೃಶ್ಯವನ್ನು ನೋಡಿದ ಜನರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

“ಪತಿ ಪತ್ನಿಯ ನಡುವೆ ಜಗಳ ವಿಕೋಪಕ್ಕೆ ತೆರಳಿ ಕೋಪದಲ್ಲಿ ಪತ್ನಿಯ ರುಂಡವನ್ನೇ ಕತ್ತರಿಸಿಬಿಟ್ಟಿದ್ದಾನೆ. ಕೃತ್ಯದ ಬಳಿಕ ರುಂಡ ಹಿಡಿದುಕೊಂಡು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಎಸ್ ಪಿ ಮಹೇಂದ್ರ ಪ್ರತಾಪ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!