Kalaburagi

“ವಠಾರ ಶಾಲೆ” ಗೆ ಹೋಗಿದ್ದ ನಾಲ್ಕು ಮಕ್ಕಳಿಗೆ ಕೊರೋನಾ ಸೋಂಕು

ಕಲಬುರಗಿ : ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಶಾಲೆ ಆರಂಭಿಸಬೇಕೆ, ಬೇಡವೇ ಎಂಬ ಚರ್ಚೆ ಪಾಲಕರಲ್ಲಿ, ಶಿಕ್ಷಣ ತಜ್ಞರಲ್ಲಿ, ಸರಕಾರದಲ್ಲಿರುವಾಗಲೇ ಈಗಾಗಲೇ ಆರಂಭಿಸಲಾಗಿರುವ “ವಿದ್ಯಾಗಮ ಯೋಜನೆ” ಅಡಿಯ “ವಠಾರ ಶಾಲೆ” ಗೆ ಹೋಗಿದ್ದ ನಾಲ್ಕು ವಿದ್ಯಾರ್ಥಿಗಳಲ್ಲಿ ಹಾಗು ಓರ್ವ ಶಿಕ್ಷಕರಲ್ಲಿ ಕೊರೋನಾ ಸೋಂಕು ಕಂಡುಬಂದು ಪಾಲಕರಲ್ಲಿ ಆತಂಕವುಂಟು ಮಾಡಿದೆ.

ಜಿಲ್ಲೆಯ ಆಫ್ಜಲಪುರ್ ತಾಲೂಕಿನ ವಠಾರ ಶಾಲೆಗೆ ಹೋಗಿದ್ದ ಮಕ್ಕಳಲ್ಲಿ ಸೋಂಕಿನ ಲಕ್ಷಣ ಕಂಡುಬಂದಿದ್ದವು. ಈ ಥರದ ಶಾಲೆಗೆ ಹೋಗುವ ಸುಮಾರು 250 ಮಕ್ಕಳ ಹಾಗು ಶಿಕ್ಷಕರನ್ನು ತಪಾಸಣೆಗೊಳಪಡಿಸಿದಾಗ ನಾಲ್ಕು ಮಕ್ಕಳಲ್ಲೂ ಹಾಗು ಓರ್ವ ಶಿಕ್ಷಕರಲ್ಲಿ ಸೋಂಕು ಕಂಡು ಬಂದಿದ್ದೆ.

ಸರಕಾರ ಮುಚ್ಚಲ್ಪಟ್ಟಿರುವ ಶಾಲೆಗಳಿಂದ ಮಕ್ಕಳ ಅಭ್ಯಾಸ ನಿಲ್ಲಬಾರದೆಂದು ಮಕ್ಕಳ ಮನೆಗಳಿಗೆ ಶಿಕ್ಷಕರನ್ನು ಕಳುಹಿಸಿ ಅವರು ಅಲ್ಲಿನ ಹತ್ತಿರದ 4-5 ಮಕ್ಕಳನ್ನು ಒಂದೆಡೆ ಬಯಲೋ, ಮಂದಿರಗಳ, ಹತ್ತಿರದ ಶಾಲೆಗಳ ಆವರಣದಲ್ಲಿ ಸೇರಿಸಿ ಸುರಕ್ಷಿತ ದೈಹಿಕ ಅಂತರದಲ್ಲಿ ಕೂರಿಸಿ ಪಾಠಮಾಡುವದು ಈ “ವಠಾರ ಶಾಲೆ” ಯ ಕಾನ್ಸೆಪ್ಟ್. ಈಗ ಶಾಲೆಗೆ ಹೋಗಿದ್ದ ಮಕ್ಕಳಿಗೆ ಸೋಂಕಾಗಿರುವದು ಆತಂಕಕ್ಕೆ ಆಸ್ಪದವಾಗಿದೆ. ಮೂವರು ಗಂಡು ಹಾಗು ಓರ್ವ ವಿದ್ಯಾರ್ಥಿನಿ ಸೋಂಕಿಗೊಳಗಾಗಿದ್ದಾರೆ.

ಈ ಯೋಜನೆಯಡಿಯಲ್ಲಿ ಮಕ್ಕಳಲ್ಲದೆ ಅನೇಕ ಶಿಕ್ಷಕರೂ ಸೋಂಕಿಗೊಳಗಾಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!