Ramdurg

23 ಶಾಲಾ ಮಕ್ಕಳಿಗೆ ಕೊರೋನಾ

ರಾಮದುರ್ಗ, ೯- ತಾಲೂಕಿನ ಎಂ ತಿಮ್ಮಾಪುರ ಗ್ರಾಮದ 23 ಮಕ್ಕಳಲ್ಲಿ ಸೋಂಕಿತರಾಗಿರುವದು ಕಂಡು ಬಂದಿದೆ.

ಸೋಂಕಿನ ಹಿನ್ನಲೆಯಲ್ಲಿ ರಾಮದುರ್ಗ ತಾಲೂಕಿನ ಬಿಈಓ “ವಿದ್ಯಾಗಮ” ಯೋಜನೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದಾರೆ. “ವಠಾರ ಶಾಲೆ” ಗಳಿಗೆ ಹೋಗುತ್ತಿರುವ ಮಕ್ಕಳ ಜೀವವನ್ನು ಅಪಾಯಕ್ಕೆ ದೂಡುವ “ವಿದ್ಯಾಗಮ ” ಯೋಜನೆಯನ್ನು ಜಿಲ್ಲೆಯಾದಂತ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಸಾಧ್ಯತೆಯಿದೆ.

ಭೌಗೋಳಿಕವಾಗಿ ಅತ್ಯಂತ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯನ್ನು ಬೆಳಗಾವಿ ಹಾಗು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳೆಂದು ವಿಭಜಿಸಲಾಗಿದೆ. ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ 120 ಶಿಕ್ಷಕರಲ್ಲಿ ಕೊರೋನಾ ಸೋಂಕು ಕಂಡುಬಂದಿತ್ತು, ಅದರಲ್ಲಿ 57 ಜನ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

“ವಿದ್ಯಾಗಮ” ಯೋಜನೆಯಡಿಯಲ್ಲಿ “ವಠಾರ ಶಾಲೆ” ಗಳಿಗೆ ತೆರಳಿ ಮಕ್ಕಳಿಗೆ ಪಾಠ ಮಾಡುತ್ತಿದ್ದ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 18 ಹಾಗು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 17 ಸೋಂಕಿಗೆ ಬಲಿಯಾಗಿದ್ದಾರೆಂದು ಎರಡೂ ಜಿಲ್ಲೆಗಳ ಡಿಡಿಪಿಆಯ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!