Rishikesh

ಯೋಗದ ನೆಪದಲ್ಲಿ ವಿದೇಶಿ ಮಹಿಳೆ ಮೇಲೆ ಆತ್ಯಾಚಾರ

ರಿಷಿಕೇಶ , ಅ 9 – ಯೋಗ ನಿರತ 37 ವರ್ಷದ ವಿದೇಶಿ ಯುವತಿ ಮೇಲೆ ಸ್ಥಳೀಯ ವ್ಯಕ್ತಿ ಅತ್ಯಾಚಾರ ಎಸಗಿರುವ ಘಟನೆ ರಿಷಿಕೇಶದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಯುವತಿ ನೀಡಿರುವ ದೂರಿನ ಪ್ರಕಾರ, ಯೋಗ ಬಗ್ಗೆ ತನಗೆ ತುಂಬಾ ಒಲವು ಇದೆ, ತಾನು ಕಲಿಯಬೇಕೆಂಬ ನೆಪದಲ್ಲಿ ತನ್ನ ಸ್ನೇಹ ಬೆಳೆಸಿದ್ದ ವ್ಯಕ್ತಿಯೇ ಯೋಗಾಭ್ಯಾಸ ಮಾಡುತ್ತಿದ್ದ ವೇಳೆ ಬಾಲ್ಕನಿಯಿಂದ ಕೊಠಡಿಗೆ ಬಂದು ಅತ್ಯಾಚಾರ ಎಸಗಿರುವುದಾಗಿ ಆಕೆ ದೂರಿನಲ್ಲಿ ತಿಳಿಸಿದ್ದಾಳೆ.

ಈ ವ್ಯಕ್ತಿ ಹಲವು ಬಾರಿ ಯುವತಿಯನ್ನು ಮನೆಗೆ ಬರುವಂತೆ ಪುಸಲಾಯಿಸಿ ತನಗೆ ಯೋಗದ ಬಗ್ಗೆ ತಿಳಿಸಿಕೊಡಬೇಕು ಎಂದು ಆರೋಪಿ ದುಂಬಾಲು ಬಿದ್ದಿದ್ದ ಎನ್ನಲಾಗಿದೆ. ಅಮೆರಿಕದ ಯುವತಿಗೆ ಯೋಗ ಮತ್ತು ಮಾದಕ ವಸ್ತುವಿನ ಮೇಲೆ ಅಪಾರ ಪ್ರೀತಿ ಇದ್ದು, ಇದರಿಂದಾಗಿ ಆರೋಪಿ ಮಹಿಳೆಗೆ ನಿಕಟವಾಗಲು ಪ್ರಯತ್ನಿಸಿರುವುದಾಗಿಯೂ ವರದಿ ಹೇಳಿದೆ.

Leave a Reply

Your email address will not be published. Required fields are marked *

Back to top button
error: Content is protected !!