Mumbai

ರೆಪೋ ದರದಲ್ಲಿ ಬದಲಾವಣೆಯಿಲ್ಲ

ಮುಂಬೈ , ಅ 9- ಭಾರತೀಯ ರಿಸರ್ವ್ ಬ್ಯಾಂಕ್ ( ಅರ್ ಬಿಐ ) ಶುಕ್ರವಾರ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಹಾಲಿ 4 ದರವನ್ನೇ ಮುಂದುವರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಬಿಐ ಗೌರ್ನರ್ ಶಕ್ತಿಕಾಂತ ದಾಸ್, ಕೇಂದ್ರ ಬ್ಯಾಂಕ್ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಘೋಷಣೆ ಮಾಡಿದರು.

ಇದೆ 7ರಿಂದ 9ರ ತನಕ ಸಭೆ ನಡೆದಿತ್ತು. ಹೊಸದಾಗಿ ಸೇರ್ಪಡೆಗೊಂಡ ಸದಸ್ಯರ ಜತೆಗೆ ನಡೆದ ಸಭೆ ಮೊದಲ ಸಭೆ ಇದಾಗಿದೆ. ಹಣದುಬ್ಬರ ನಿಯಂತ್ರಣ ಹಾಗೂ ಬೆಳವಣಿಗೆ ಎರಡನ್ನೂ ಗಮನದಲ್ಲಿ ಇಟ್ಟುಕೊಂಡು, ಇಂದಿನ ತೀರ್ಮಾನ ಕೈಗೊಳ್ಳಲಾಗಿದೆ ಎಮದು ಅವರು ಹೇಳಿದರು. .

ಕಳೆದ ಒಂದೂಮುಕ್ಕಾಲು ವರ್ಷದಲ್ಲಿ 250 ಬೇಸಿಸ್ ಪಾಯಿಂಟ್ ಕಡಿತ ಮಾಡಿದೆ ಅದರಲ್ಲೂ ಕೊರೊನಾ ಬಿಕ್ಕಟ್ಟು ಆರಂಭವಾದ ನಂತರ 115 ಬೇಸಿಸ್ ಪಾಯಿಂಟ್ ಇಳಿಸಲಾಗಿದೆ ಎಂದೂ ಅವರು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!