Thiruvananthapuram

ವಿಶ್ವವಿಖ್ಯಾತ ಪದ್ಮನಾಭ ದೇವಸ್ಥಾನದ ಪ್ರಧಾನ ಅರ್ಚಕ ಸೇರಿ 12 ಮಂದಿಗೆ ಕೋವಿಡ್

ತಿರುವನಂತಪುರಂ, ಅ 9- ವಿಶ್ವವಿಖ್ಯಾತ, ಅತಿ ಶ್ರೀಮಂತ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಾಲಯದ ಪ್ರಧಾನ ಅರ್ಚಕರು ಸೇರಿದಂತೆ 12 ಮಂದಿಗೆ ಕೊರೊನವೈರಸ್‍ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸಾರ್ವಜನಿಕರಿಗೆ ದರ್ಶನವನ್ನು ಅ 15ರವರೆಗೆ ನಿರ್ಬಂಧಿಸಿದೆ.

‘ಪೆರಿಯಾ ನಂಬಿ’ (ಪ್ರಧಾನ ಅರ್ಚಕ) ದೈನಂದಿನ ಪೂಜಾ ವಿಧಿವಿಧಾನಗಳನ್ನು ಮಾಡಲು ಸಾಧ್ಯವಾಗದ ಕಾರಣ, ದೇವಾಲಯ ಆಡಳಿತ ಮಂಡಳಿ ಮನವಿಯಂತೆ ತರಣನಲ್ಲೂರು ಸತೀಸನ್ ನಂಬೂದರಿ ಪಾದ್‍ ಪ್ರಧಾನ ಅರ್ಚಕ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಕೋವಿಡ್ ಬೆದರಿಕೆಯಿಂದಾಗಿ ದೇವಾಲಯದಲ್ಲಿ ಕಡಿಮೆ ಸಂಖ್ಯೆ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.

ಕೇರಳದ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯ ಅತಿ ಶ್ರೀಮಂತ ದೇವಾಲಯ ಎಂಬ ಖ್ಯಾತಿಗೆ ಪಾತ್ರವಾಗಿದೆ. ಲಾಕ್‍ಡೌನ್‍ ಸಡಲಿಕೆ ನಂತರ ಭಕ್ತರಿಗೆ ದರ್ಶನಕ್ಕಾಗಿ ಅವಕಾಶ ಮಾಡಿಕೊಡಲಾಗಿತ್ತು. ಇದೀಗ ದೇವಾಲಯದ ಸಿಬ್ಬಂದಿಗೆ ಸೋಂಕು ತಗುಲಿರುವುದರಿಂದ ಮತ್ತೆ ಸಾರ್ವಜನಿಕರ ದರ್ಶನವನ್ನು ನಿರ್ಬಂಧಿಸಲಾಗಿದೆ.

Leave a Reply

Your email address will not be published. Required fields are marked *

Back to top button
error: Content is protected !!