Bengaluru

ಮುನ್ನಚ್ಚರಿಕೆ ಕ್ರಮ ಕೈಗೊಂಡು ಶಾಲೆ ಆರಂಭಿಸಿ : ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಫಾರಸ್ಸು

ಬೆಂಗಳೂರು,ಅ 08- ಕೋವಿಡ್ ಸಾಂಕ್ರಾಮಿಕ ರೋಗ ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ಶಾಲೆಗಳನ್ನು ಆರಂಭಿಸುವ ಅಧಿಕಾರವನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಗಳಿಗೆ ನೀಡಿದೆ.ರಾಜ್ಯ ಸರ್ಕಾರ ಶಾಲೆಗಳನ್ನು ಆರಂಭಿಸುವ ಬಗ್ಗೆ ಮಕ್ಕಳ ಪೋಷಕರು,ಶಾಲಾ ಆಡಳಿತ ಮಂಡಳಿ,ಶಿಕ್ಷಣ ಸಂಸ್ಥೆಗಳು,ಶಿಕ್ಷಕರು ಹಾಗೂ ಆರೋಗ್ಯ ತಜ್ಞರ ಜೊತೆ ಸಮಾಲೋಚ ನೆ ನಡೆಸುತ್ತಿದೆ.ಇದೀಗ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಒಂದು ಹೆಜ್ಜೆ ಮುಂದೆ ಹೋಗಿ ಶಾಲೆ ಆರಂಭಿಸಿದರೆ ಅಗತ್ಯವಾಗಿ ಮುನ್ನಚ್ಚರಿಕೆ ಕ್ರಮಗಳ ಕೈಗೊಳ್ಳುವ ಬಗ್ಗೆ ಸರ್ಕಾರಕ್ಕೆ ಶಿಫಾರ ಸ್ಸು ಮಾಡಿದೆ.

ಶಾಲೆಗಳನ್ನು ಆರಂಭಿಸುವುದಾದರೆ ಅಗತ್ಯ ಮುನ್ನಚ್ಚರಿಕೆ, ಶುಚಿತ್ವ, ಸೌಲಭ್ಯಗಳು, ಸ್ಯಾನಿಟೈಸ್, ಮಾಸ್ಕ್ , ಸಾಮಾಜಿಕ ಅಂತರ, ಪಾಳಿಯಲ್ಲಿ ತರಗತಿ ನಡೆಸುವುದು, ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮೊದಲು ಆರಂಭಿಸುವುದು ಸೇರಿದಂತೆ 20ಕ್ಕೂ ಹೆಚ್ಚು ಸಲಹೆ ಸೂಚನೆಗಳನ್ನು ಸರ್ಕಾರಕ್ಕೆ ನೀಡಿದೆ.

ಶಾಲೆಗಳಲ್ಲಿ ಬಿಸಿನೀರಿನ ವ್ಯವಸ್ಥೆ,ಪೌಷ್ಠಿಕ ಆಹಾರ,ಸ್ಯಾನಿಟೈಸ್ ಇತ್ಯಾದಿ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಅಳವಡಿಸಬೇಕು. 2020-21ವನ್ನು ಪರೀಕ್ಷಾ ರಹಿತ ಕಲಿಕಾ ವರ್ಷವೆಂದು ಘೋಷಿಸಬೇಕು ಎಂದು ಸೂಚನೆ ನೀಡಿದೆ.

ಶಾಲೆಗಳನ್ನು ತೆರೆಯುವುದು ದೊಡ್ಡ ಸಮಸ್ಯೆಯಲ್ಲ. ಹೆಚ್ಚು ವಯಸ್ಸಾದವರಿಗೆ ಹೋಲಿಸಿದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಇರುತ್ತದೆ. ಈ ಅಂಶ ಗಳ ಬಗ್ಗೆ ಪಾಲಕರಲ್ಲಿ ಜಾಗೃತಿ ಮೂಡಿಸಿ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಮಕ್ಕಳ ಹಕ್ಕು ರಕ್ಷಣಾ ಆಯೋಗ ಸಲಹೆ ನೀಡಿದೆ. ಆ ಮೂಲಕ ಶಾಲೆಗಳನ್ನು ಆರಂಭಿಸುವಂತೆ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ.

# ಶಾಲೆಗಳ ಆರಂಭಿಸಲು ಕಟ್ಟುನಿಟ್ಟಾಗಿ ಪಾಲಿಸಬೇಕಾದ ನಿಯಮಗಳು ಇಂತಿವೆ.
1.ಈ ಸಾಲಿನ ವರ್ಷವನ್ ಪರೀಕ್ಷಾ ರಹಿತ ಕಲಿಕಾ ವರ್ಷವೆಂದು ಘೋಷಿಸಬೇಕು.
2.ಮಕ್ಕಳ ಸಂಖ್ಯೆ 30ಕ್ಕಿಂತ ಕಡಿಮೆ ಇರುವ ಶಾಲೆಗಳನ್ನ ಮೊದಲು ಆರಂಭಿಸಬೇಕು.ಮೊದಲ 15 ದಿನ ಈ ಶಾಲೆಗಳು ಅರ್ಧ ದಿನ ಮಾತ್ರ ಕಾರ್ಯನಿರ್ವಹಿಸಬೇಕು.

3.ಹೆಚ್ಚು ಮಕ್ಕಳಿರುವ ಶಾಲೆಗಳನ್ನ ಪಾಳಿ ಪದ್ಧತಿಯಲ್ಲಿ ಪ್ರಾರಂಭಿಸಬೇಕು.ಕಾಲ ಕಾಲಕ್ಕೆ ಅಗತ್ಯಕ್ಕೆ ತಕ್ಕಂತೆ ಮಾರ್ಗಸೂಚಿಗಳನ್ನ ಬದಲಾಯಿಸಿಕೊಂಡು ಶಾಲೆಗಳನ್ನ ನಿರ್ವಹಿಸಬೇಕು.
4.ಮಕ್ಕಳಿಗೆ ಮಾನಸಿಕ ಸ್ಥೈರ್ಯ ತುಂಬುವಂಥಹ ಆಪ್ತಸಮಾಲೋಚಕರನ್ನ ನೇಮಿಸಬೇಕು.
# ಶಾಲೆಗಳನ್ನ ಆರಂಭಿಸುವ ಮುನ್ನ ಕೈಗೊಳ್ಳಬೇಕಾದ ಪೂರ್ವ ಸಿದ್ದತಾ ಕ್ರಮಗಳು :

1.ಪೋಷಕರೊಂದಿಗೆ ಹಾಗೂ ಎಸ್​ಡಿಎಂಸಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಬೇಕು
2.ಎಸ್​ಡಿಎಂಸಿ ಮತ್ತು ಗ್ರಾಮ ಪಂಚಾಯತ್​ಗಳ ಸಹಕಾರದಿಂದ ಎಲ್ಲಾ ಶಾಲೆಗಳ ಕೊಠಡಿಗಳನ್ನ ಹಾಗೂ ಪೀಠೋಪಕರಣಗಳನ್ನ ಸ್ವಚ್ಛಗೊಳಿಸಬೇಕು,ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಬೇಕು.

3.ಶಾಲೆಯಲ್ಲಿರುವ ಎಲ್ಲಾ ಶೌಚಾಲಯಗಳು,ನೀರಿನ ತೊಟ್ಟಿ ಮತ್ತು ವಾಷ್ ಬೇಸಿನ್​ಗಳನ್ನ ನಿರಂತರ ಸ್ವಚ್ಛಗೊಳಿಸಬೇಕು.

4.ಎಲ್ಲಾ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಾದ ನೀರು, ಶೌಚಾಲಯ ಮೊದಲಾದ ವ್ಯವಸ್ಥೆ ಇರಬೇಕು.ಮಕ್ಕಳಿಗೆ ಕೈ ತೊಳೆಯಲು ಅಗತ್ಯ ಸಾಬೂನು ಮತ್ತಿತರ ಸೌಲಭ್ಯ ಇರಬೇಕು.

5.ಮಾಸ್ಕ್, ದೈಹಿಕ ಅಂತರ ಪಾಲನೆಯಾಗುವಂತೆ ಎಚ್ಚರ ವಹಿಸಬೇಕು.

# ಮಕ್ಕಳಿಗೆ ಒದಗಿಸಬೇಕಾದ ಅವಶ್ಯಕತೆಗಳನ್ನು ಕಡ್ಡಾಯವಾಗಿ ,ಕಟ್ಟುನಿಟ್ಟಾಗಿ ಪಾಲಿಸುವುದು.
1.ಮಕ್ಕಳಿಗೆ ಶಾಲೆಯಲ್ಲಿ ಬೆಳಗಿನ ಬಿಸಿ ಹಾಲು,ಮಧ್ಯಾಹ್ನದ ಪೌಷ್ಠಿಕಯುಕ್ತ ಬಿಸಿಯೂಟ ಒದಗಿಸಬೇಕು.ಆಹಾರದ ಜೊತೆ ರೋಗ ನಿರೋಧ ಮಾತ್ರೆಗಳನ್ನ ನೀಡಬೇಕು.
2.ಮಕ್ಕಳ ಆರೋಗ್ಯ ಪರೀಕ್ಷೆ ನಿಯಮಿತವಾಗಿ ಮಾಡಬೇಕು.

3.ಮಕ್ಕಳ ಶೂ,ಶಾಲಾ ಬ್ಯಾಗ್​ಗಳನ್ನ ಇಡಲು ಒಂದು ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡಬೇಕು.

ಶಿಕ್ಷಕರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಗಪಡಬೇಕು.ಶಾಲೆಗೆ ಆಗಮಿಸುವ ಯಾವುದೇ ವ್ಯಕ್ತಿ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುವಂತೆ ನೋಡಿ ಕೊಳ್ಳಬೇಕು.ಗುಂಪು ಚಟುವಟಿಕೆ ವೇಳೆ ಸಾಮಾಜಿಕ ಅಂತರ ಪಾಲಿಸಬೇಕು. ಬಿಸಿಯೂಟಕ್ಕಾಗಿ ಇರುವ ಅಡುಗೆ ಕೋಣೆ ಸ್ವಚ್ಛ ಮಾಡಬೇಕು. ಅಡುಗೆ ಸಾಮ ಗ್ರಿಗಳನ್ನ ಸ್ವಚ್ಛವಾ ಗಿಟ್ಟುಕೊಳ್ಳಬೇಕು. ಅಡುಗೆ ಮಾಡುವ ಸಿಬ್ಬಂದಿ ಕೋವಿ ಡ್ ಪರೀಕ್ಷೆಗೆ ಒಳಪಡಬೇಕು,ಕಡ್ಡಾಯವಾಗಿ ಮಾಸ್ಕ್,ಗ್ಲೌಸ್ ಧರಿಸಬೇಕು. ಆಗಾಗ ಸ್ಯಾನಿಟೈಸರ್​ನಿಂದ ಕೈ ತೊಳೆದುಕೊಳ್ಳಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಿಕ್ಷಣ ಇಲಾಖೆಗೆ ಪ್ರಧಾನ ಕಾರ್ಯದರ್ಶಿ, ಶಿಕ್ಷಣ ಇಲಾಖೆ ಆಯುಕ್ತರಿಗೆ ಶಿಫಾರಸ್ಸು ಮಾಡಿದೆ.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮಾಡಿರುವ ಶಿಫಾರಸ್ಸು ಸಾರ್ವಜನಿಕರ ಆಕ್ರೋಷಕ್ಕೆ ಗುರಿಯಾಗಿದೆ.ಮಕ್ಕಳ ಜೊತೆ ರಾಜ್ಯ ಸರ್ಕಾರ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಚೆಲ್ಲಾಟವಾಡುವುದನ್ನು ಬಿಡಿ.ಮಕ್ಕಳ ಪ್ರಾಣ ಹಾಗೂ ಜೀವನ ಅತ್ಯಂತ ಮುಖ್ಯ.ಕೊರೋನಾ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ವೆಂಟಿಲೇಟರ್ ಗಳಿಲ್ಲದೆ ಜನ ಸಾಯುತ್ತಿದ್ದಾರೆ. ಔಷಧಿಗಳಿಲ್ಲ, ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಶಾಲೆಗಳನ್ನು ಆರಂಭಿಸಿದ ಮಕ್ಕಳ ಬದುಕಿದೆ ಕಂಟಕ ತರಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!