Bengaluru

ಶಾಲೆ ಪ್ರಾರಂಭಿಸಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಲಹೆ

ಬೆಂಗಳೂರು, ೮- ರಾಜ್ಯದಲ್ಲಿ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿರುವ ಈ ಹಂತದಲ್ಲಿ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಅಸಮ್ಮತಿ ತೋರಿಸಿದ್ದರೂ ಸಹ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ವಿಚಿತ್ರ ವಾದ ಮುಂದಿಟ್ಟು ಶಾಲೆ ಪುನಃ ಆರಂಭಿಸಲು ಸಲಹೆ ನೀಡಿದೆ.

ಶಾಲೆ ಪ್ರಾರಂಭವಾದರೆ ಏನಾಗಬಹುದು ಎಂಬುದಕ್ಕಿಂತ ಶಾಲೆ ತೆರೆಯದಿದ್ದರೆ ಏನಾಗಬಹುದು ಎಂಬ ಕಾರಣಗಳನ್ನು ನೀಡಿ ಶಾಲೆ ಪ್ರಾರಂಭಿಸಿಯೆಂದಿದೆ.

ಶಾಲೆ ಪ್ರಾರಂಭಿಸದಿದ್ದರೆ ಬಾಲ್ಯವಿವಾಹ, ಬಾಲಕಾರ್ಮಿಕರ ಸಂಖ್ಯೆ ಹೆಚ್ಚಾಗಲಿದೆ ಇದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂದಿದೆ. ಆದರೆ ಶಾಲೆ ಪ್ರಾರಂಭಿಸಿದರೆ ಕೊರೋನಾ ಸೋಂಕಿನಿಂದ ಏನಾಗಬಹುದು ಎಂದು ಹೇಳಿಲ್ಲ.

ಆಯೋಗ ಲಭ್ಯವಿರುವ ಸಂಶೋಧನೆ ಪ್ರಕಾರ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ, ಹೀಗಾಗಿ ಪ್ರಾರಂಭಿಸಿ ಎಂದು ಹೇಳಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!