Belagavi

ವಿವಾಹ ವಿಚೇದನ ಹಿಂದಕ್ಕೆ ಪಡೆಯಲ್ಲಿದ್ದಾರೆ ಚಿತ್ರ ಸಾಹಿತಿ ಕಲ್ಯಾಣ ಪತ್ನಿ ಅಶ್ವಿನಿ

ಬೆಳಗಾವಿ, ೮- ಪ್ರೇಮಕವಿ, ಚಿತ್ರಸಾಹಿತಿ ಕೆ. ಕಲ್ಯಾಣ ಅವರ ಕುಟುಂಬದಲ್ಲಿ ಮೂಡಿದ್ದ ಬಿರುಕು ಸರಿಯಾಗುವ ಸಾಧ್ಯತೆಯಿದೆ. ಪತಿಯೊಂದಿಗೆ ಬದುಕುವದು ಸಾಧ್ಯವಿಲ್ಲವೆಂದು ಬೆಳಗಾವಿಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚೇದನಕ್ಕೆ ಅರ್ಜಿ ಸಲ್ಲಿಸಿದ್ದ ಅವರ ಪತ್ನಿ ಅಶ್ವಿನಿ ಅರ್ಜಿಯನ್ನು ಹಿಂದಕ್ಕೆ ಪಡೆಯಲಿದ್ದಾರೆಂದು ತಿಳಿದುಬಂದಿದೆ.

ಕಲ್ಯಾಣ ಅವರು “ತಮ್ಮ ಪತ್ನಿ ಅಶ್ವಿನಿ ತುಂಬಾ ಒಳ್ಳೆಯವರು. ಅವರ ಮೈಂಡ್ ವಾಶ್ ಮಾಡಲಾಗಿದೆ. ಒಂದೆರಡು ಗಂಟೆಗಳ ಕಾಲ ಸಮಾಲೋಚಕರಿಂದ ಸಮಾಲೋಚನೆ ನಡೆಸಿದರೆ ಅವರು ತಮ್ಮ ಮನಸು ಚೇಂಜ್ ಮಾಡಿಕೊಳ್ಳುತ್ತಾರೆ” ಎಂದು ತಿಳಿಸಿದ್ದರು. ಅವರ ವಿಶ್ವಾಸದಂತೆ ಪತಿ, ಪತ್ನಿ ಇಬ್ಬರನ್ನೂ ಪ್ರತ್ಯೇಕವಾಗಿ ಹಾಗು ಜೊತೆಯಾಗಿ ಕೌನ್ಸೆಲ್ಲಿಂಗ್ ಮಾಡಲಾಯಿತು. ಪತ್ನಿ ಅಶ್ವಿನಿ ಮನಸ್ಸನ್ನು ಬದಲಾಯಿಸಿಕೊಂಡು, ವಿಚ್ಛೇದನ ಅರ್ಜಿ ಹಿಂಪಡೆದು ಪತಿಯೊಂದಿಗೆ ವೈವಾಹಿಕ ಜೀವನ ಮುಂದುವರೆಸಲು ನಿಧ೯ರಿಸಿದ್ದಾರೆಂದು ತಿಳಿದುಬಂದಿದೆ.

ಅಶ್ವಿನಿಯವರು, ವಿಚ್ಛೇದನ ಕೋರಿ ಬೆಳಗಾವಿ ಕೌಟುಂಬಿಕ ನ್ಯಾಯಾಲಯಕ್ಕೆ ಜೂನ್ 16ರಂದು ಅರ್ಜಿ ಸಲ್ಲಿಸಿದ್ದರು.

ಕಲ್ಯಾಣ ಅವರು ತಮ್ಮ ಪತ್ನಿ ಅಶ್ವಿನಿ ಅಪಹರಣ ಆಗಿದ್ದಾರೆ ಎಂದು ಬೆಳಗಾವಿಯ ಮಾಳಮಾರುತಿ ಠಾಣೆಗೆ ದೂರು ನೀಡಿದ್ದರು. ಅಲ್ಲದೇ ತಮ್ಮ ಬೆಂಗಳೂರಿನ ಮನೆಯಲ್ಲಿ ಅಡುಗೆ ಕೆಲಸಕ್ಕಿದ್ದ ಗಂಗಾ ಕುಲಕರ್ಣಿ ಆಗಮನದಿಂದ ಸಂಸಾರದಲ್ಲಿ ಬಿರುಕಾಯಿತು. ಗಂಗಾ ಬಾಗಲಕೋಟೆಯ ಬೀಳಗಿ ನಿವಾಸಿ ಶಿವಾನಂದ ವಾಲಿ ಎಂಬುವರನ್ನು ಅಶ್ವಿನಿ ಹಾಗು ಅವರ ತಾಯಿಗೆ ಪರಿಚಯಿಸಿದರು. ಅವರು ವಶೀಕರಣ, ಮಾಟ-ಮಂತ್ರ ಮುಂತಾದನ್ನು ಮಾಡಿಸಿ ತಮ್ಮ ಕುಟುಂಬದಲ್ಲಿ ಬಿರುಕುಂಟಾಗುವಂತೆ ಮಾಡಿದ್ದಾರೆ. ಅಲ್ಲದೇ ಅಶ್ವಿನಿ ಅವರ ಬ್ಯಾಂಕ್ ಅಕೌಂಟ್ ನಿಂದ ವಾಲಿ ಅವರ ಬ್ಯಾಂಕ್ ಅಕೌಂಟ್ ಗೆ ಲಕ್ಷಾಂತರ ರೂಪಾಯಿ ವರ್ಗಾವಣೆಯಾಗಿದೆ ಎಂದು ದೂರು ನೀಡಿದ್ದರು.

ಕಲ್ಯಾಣ ದೂರಿನ ಹಿನ್ನೆಲೆಯಲ್ಲಿ ಶಿವಾನಂದ ವಾಲಿಯನ್ನು ಪೊಲೀಸರು ಬಂಧಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!