Bengaluru

ಶಾಲೆ ಪ್ರಾರಂಭಕ್ಕೆ ವಿಪಕ್ಷಗಳ ವಿರೋಧ

ಬೆಂಗಳೂರು,ಅ.8- ಶಾಲೆ ಪ್ರಾರಂಭಕ್ಕೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು,ಮಕ್ಕಳ ಹಿತದೃಷ್ಟಿಯಿಂದ ಸದ್ಯಕ್ಕೆ ಶಾಲೆ ಪ್ರಾರಂಭಿಸುವುದು ಬೇಡ ಎಂದು ವಿಪಕ್ಷ ನಾಯಕರು ಹೇಳಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಈಗ ಶಾಲೆ ಪ್ರಾರಂಭ ಮಾಡಬಾರದು. ಈಗಲೇ ದಿನಕ್ಕೆ 9-10 ಸಾವಿರ ಕೊರೊನಾ ಸೋಂಕಿತರ ಸಂಖ್ಯೆ ಪತ್ತೆಯಾಗುತ್ತಿವೆ. ಪರೀಕ್ಷೆಯ ಪ್ರಮಾಣವನ್ನು ಇನ್ನೂ ಹೆಚ್ಚಿಸಿದರೆ ಪಾಸಿಟಿವ್‌ ಪ್ರಕರಣಗಳು ಇನ್ನೂ ಹೆಚ್ಚುತ್ತವೆ. ಬುದ್ಧಿ ಇರುವ ದೊಡ್ಡವರೇ ಸರಿಯಾಗಿ ಎಚ್ಚರಿಕೆಯಿಂದ ಇರುವುದಿಲ್ಲ. ಮಾಸ್ಕ್ ಧರಿಸುವುದಿಲ್ಲ. ಅಂತಹದರಲ್ಲಿ ಮಕ್ಕಳು ಜಾಗೃತಿಯಿಂದ ಇರುತ್ತವೆಯಾ? ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪೋಷಕರು ಒಪ್ಪಲಿ ಬಿಡಲಿ ಶಾಲೆ ಆರಂಭಿಸಬಾರದು. ಈ ವರ್ಷ ಎಲ್ಲಾ ಮಕ್ಕಳನ್ನು ಪ್ರಮೋಶನ್ ಕೊಟ್ಟು ತೇರ್ಗಡೆ ಮಾಡಲಿ. ಆನ್ ಲೈನ್ ಕ್ಲಾಸ್ ಬೇಕಾದರೂ ಮಾಡಲಿ. ಆದರೆ ಯಾವುದೇ ಕಾರಣಕ್ಕೂ ಶಾಲೆ ಆರಂಭಿಸಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕೊರೊನಾ ಆತಂಕದ ನಡುವೆ ಶಾಲೆ ಆರಂಭಿಸುವುದು ಸೂಕ್ತವಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಕೊರೊನಾ ಕುರಿತಂತೆ ಪೋಷಕರಲ್ಲಿ ಆತಂಕವಿದೆ. ಮಕ್ಕಳ ಜೀವನದ ಜೊತೆ ಚೆಲ್ಲಾಟ ಬೇಡ. ಸರಕಾರ ಶಾಲೆ ಆರಂಭಿಸುವ ನಿರ್ಧಾರ ಕೈಬಿಡಬೇಕು. ಸದ್ಯಕ್ಕೆ ಶಾಲಾ-ಕಾಲೇಜುಗಳ ಆರಂಭ ಬೇಡ. ಸೂಕ್ತ ಸಿದ್ಧತೆ ಇಲ್ಲದೇ ಶಾಲಾ ಕಾಲೇಜು ಆರಂಭಿಸಬಾರದೆಂದು ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!