Stockholm

ಅಮೆರಿಕ ಕವಯತ್ರಿ ಲೂಯಿಸ್ ಗ್ಲಕ್ ಅವರಿಗೆ ನೊಬೆಲ್ ಸಾಹಿತ್ಯ ಪುರಸ್ಕಾರ

ಸ್ಟಾಕ್‍ಹೋಮ್‍, ಅ 8- 2020 ರ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಅಮೆರಿಕದ ಕವಯತ್ರಿ ಲೂಯಿಸ್ ಗ್ಲಕ್ ಅವರಿಗೆ ಕೊಡಮಾಡಲಾಗಿದೆ.

ಗ್ಲಕ್ ಅವರು ಯೇಲ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯ ಪ್ರಾಧ್ಯಾಪಕರಾಗಿದ್ದಾರೆ. 1943 ರಲ್ಲಿ ಗ್ಲಕ್‍ ನ್ಯೂಯಾರ್ಕ್‍ ನಲ್ಲಿ ಜನಿಸಿದರು. ಅವರ ಸಾಹಿತ್ಯವು ಮನುಷ್ಯನ ದು:ಖದ ವಾಸ್ತವವನ್ನು ಕೇಂದ್ರೀಕರಿಸಿದೆ. ಸಾವು, ಬಾಲ್ಯ ಮತ್ತು ಕುಟುಂಬ ಜೀವನದಂತಹ ವಿಷಯಗಳೊಂದಿಗೆ ಅವರ ಸಾಹಿತ್ಯ ಸಮ್ಮಿಳಿತಗೊಂಡಿದೆ. .

‘ಗ್ಲಕ್ ಸಾರ್ವತ್ರಿಕತೆಯನ್ನು ಬಯಸುತ್ತಾರೆ. ಇದರಲ್ಲಿ ಆಕೆ ಪುರಾಣಗಳು ಮತ್ತು ಶಾಸ್ತ್ರೀಯ ಲಕ್ಷಣಗಳಿಂದ ಸ್ಫೂರ್ತಿ ಪಡೆಯುತ್ತಾರೆ. ಇದು ಆಕೆಯ ಹೆಚ್ಚಿನ ಕೃತಿಗಳಲ್ಲಿ ಕಂಡುಬರುತ್ತದೆ. ಅವರ 2006 ರ ಕವನ ಸಂಗ್ರಹ ಅವೆರ್ನೊ ಇದಕ್ಕೆ ನಿದರ್ಶನವಾಗಿದೆ.’ ಎಂದು ನೊಬೆಲ್‍ ಪ್ರಶಸ್ತಿ ಆಯ್ಕೆ ಅಕಾಡೆಮಿ ಹೇಳಿದೆ.
‘ದಿ ವೈಲ್ಡ್ ಐರಿಸ್ ‘ ಸಂಗ್ರಹಕ್ಕಾಗಿ ಗ್ಲಕ್ ಅವರು 1993 ರಲ್ಲಿ ಪುಲಿಟ್ಜೆರ್ ಪ್ರಶಸ್ತಿಯನ್ನು, 2014 ರಲ್ಲಿ ರಾಷ್ಟ್ರೀಯ ಪುಸ್ತಕ ಪ್ರಶಸ್ತಿಗೆ ಬಾಜನರಾಗಿದ್ದಾರೆ.

ಈ ವರ್ಷದ ನೊಬೆಲ್‍ ಪುರಸ್ಕಾರ ಸಮಾರಂಭ ಕೊವಿಡ್‍-19 ಸಾಂಕ್ರಾಮಿಕ ನೆರಳಿನಲ್ಲಿ ನಡೆಯಲಿದೆ. ಆಗಸ್ಟ್ ನಲ್ಲಿ ನಡೆಯಬೇಕಿದ್ದ ಸಮಾರಂಭಕ್ಕೆ ಬದಲಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬಹುಮಾನಗಳನ್ನು ವಿತರಿಸಲಾಗುವುದು. ಅಂದರೆ ಪುರಸ್ಕೃತರು ತಾವಿರುವದ ದೇಶಗಳಲ್ಲೇ ಪ್ರಶಸ್ತಿ ಪಡೆಯುತ್ತಾರೆ. ನೊಬೆಲ್ ಪ್ರಶಸ್ತಿಗಳಿಗೆ ಆಲ್ಫ್ರೆಡ್ ನೊಬೆಲ್ ಹೆಸರಿಡಲಾಗಿದೆ. 1901 ರಿಂದ ವಿಜ್ಞಾನ, ಸಾಹಿತ್ಯ ಮತ್ತು ಶಾಂತಿ ಸಾಧನೆಗಳಿಗಾಗಿ ನೊಬೆಲ್ ಅವರ ಇಚ್ಛೆಯನುಸಾರ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

Leave a Reply

Your email address will not be published. Required fields are marked *

Back to top button
error: Content is protected !!