New Delhi

೮೪೦೦ ಕೋಟಿ ರೂ. ವಿಮಾನ ಖರೀದಿ ಬಿಟ್ಟು ಯೋಧರಿಗೆ ಜಾಕೆಟ್, ಬೂಟು ಖರೀದಿಸಿ – ರಾಹುಲ್

ನವದೆಹಲಿ,ಅ. 8- ಸಿಯಾಚಿನ್-ಲಡಾಖ್ ಗಡಿಯಲ್ಲಿ ನಿಯೋಜಿಸಿರುವ ಸೇನಾ ಯೋಧರಿಗೆ ಬೆಚ್ಚಗಿನ ಬಟ್ಟೆ, ಇತರ ಸಲಕರಣೆಗಳ ಖರೀದಿ ವಿಳಂಬದ ಬಗ್ಗೆ ಸಿಎಜಿ ವರದಿ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ತಮ್ಮ ಖಾಸಗಿ ಹಾರಾಟಕ್ಕಾಗಿ ೮೪೦೦ ಕೋಟಿ ರೂ.ಗಳ ಬೋಯಿಂಗ್ ವಿಮಾನ ಖರೀದಿಯನ್ನು ಪ್ರಶ್ನಿಸಿರುವ ಅವರು ಇದರ ಬದಲು ಗಡಿಯಲ್ಲಿ ಯೋಧರಿಗೆ ಜಾಕೆಟ್, ಬೂಟುಗಳು ಹಾಗೂ ಆಮ್ಲಜನಕ ಸಿಲಿಂಡರ್‌ಗಳ ಖರೀದಿಗೆ ಬಳಸಬಹುದಾಗಿತ್ತು ಎಂದು ಹೇಳಿದ್ದಾರೆ.

ಸಿಯಾಚಿನ್-ಲಡಾಖ್ ಗಡಿಯಲ್ಲಿ ಸೈನಿಕರಿಗೆ ಬೆಚ್ಚಗಿನ ಬಟ್ಟೆ ಹಾಗೂ ಸಲಕರಣೆಗಳ ಖರೀದಿ ವಿಳಂಬದ ಬಗ್ಗೆ ಸಿಎಜಿ ವರದಿಗೆ ಪ್ರತಿಕ್ರಿಯಿಸಿದ ರಾಹುಲ್, ಪ್ರಧಾನಿ ಮೋದಿ ತಮಗಾಗಿ ೮೪೦೦ ಕೋಟಿ ರೂ. ವಿಮಾನ ಖರೀದಿಸಿದ್ದಾರೆ. ಆದರೆ ಈ ಮೊತ್ತದಲ್ಲಿ, ಸಿಯಾಚಿನ್-ಲಡಾಖ್ ಗಡಿಯಲ್ಲಿರುವ ಯೋಧರ ಅನುಕೂಲಕ್ಕಾಗಿ ಬೆಚ್ಚಗಿರುವ ಬಟ್ಟೆ ಖರೀದಿಸಬಹುದಿತ್ತು. ಆದರೆ ಪ್ರಧಾನಿ ಮೋದಿ ಕೇವಲ ತಮ್ಮ ಇಮೇಜ್ ಹೆಚ್ಚಿಸಿಕೊಳ್ಳುವ ಬಗ್ಗೆ ಮಾತ್ರ ಕಾಳಜಿ ಹೊಂದಿದ್ದಾರೆ. ಆದರೆ ದೇಶದ ಸೈನಿಕರ ಬಗ್ಗೆ ಕಾಳಜಿ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಸಿಯಾಚಿನ್-ಲಡಾಖ್ ಗಡಿಯಲ್ಲಿ ಪೋಸ್ಟ್ ಮಾಡಿದ ಸೈನಿಕರಿಗೆ ಬೆಚ್ಚಗಿನ ಬಟ್ಟೆ ಹಾಗೂ ಸಲಕರಣೆಗಳ ಖರೀದಿಯಲ್ಲಿ ವಿಳಂಬವಾಗಿದೆ ಎಂದು ಸಿಎಜಿ ವರದಿ ಸುದ್ದಿಯನ್ನು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ತಮ್ಮ ಖಾಸಗಿ ಬಳಕೆಗಾಗಿ ಬೋಯಿಂಗ್ ವಿಮಾನ ಖರೀದಿಸಿರುವವುದನ್ನು ಅವರು ಟೀಕಿಸಿದ್ದಾರೆ. .

ಪಂಜಾಬ್‌ನ ಪಟಿಯಾಲದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಲಡಾಖ್‌ನಲ್ಲಿ ಗಡಿಯಲ್ಲಿ ಭಾರತೀಯ ಸೇನೆಯ ಮೇಲೆ ಚೀನಾ ದಾಳಿ ನಡೆಸುತ್ತಿರುವಾಗ ಇಷ್ಟು ದೊಡ್ಡ ಮೊತ್ತವನ್ನು ವಿಮಾನ ಖರೀದಿಗೆ ವೆಚ್ಚ ಮಾಡುವ ಆಗತ್ಯ ಏನಿತ್ತು? ಈ ಹಣವನ್ನು ಪೂರ್ವ ಲಡಾಖ್ ನಲ್ಲಿ ಯೋಧರಿಗೆ ಶಸ್ತ್ರಾಸ್ತ್ರ, ಮದ್ದುಗುಂಡು, ಇಂಧನ, ಆಹಾರ ಮತ್ತು ಚಳಿಗಾಲದ ಅಗತ್ಯ ವಸ್ತುಗಳ ಖರೀದಿಗೆ ಬಳಸಬಹುದಿತ್ತು ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!