Entertainment

ಕರ್ನಾಟಕ ಚಲನಚಿತ್ರ ಅಕಾಡೆಮಿ-ಬಿಡಿಎ ಚಲನಚಿತ್ರ ಭಂಡಾರ ಸ್ಥಾಪನೆಗೆ ಚಾಲನೆ

ಬೆಂಗಳೂರು, ಅ08- ಚಿತ್ರರಂಗಕ್ಕೆ ಸಂಬಂಧಿಸಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯು ತನ್ನ ಧ್ಯೇಯೋದ್ದೇಶಗಳಲ್ಲಿ ಒಂದಾದ ಚಲನಚಿತ್ರ ಭಂಡಾರವನ್ನು ಸ್ಥಾಪನೆಗೆ ಚಾಲನೆ ನೀಡಿದೆ.

ಪ್ರಸ್ತುತ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಸುನೀಲ ಪುರಾಣಿಕ ”ಕರ್ನಾಟಕ ಚಲನಚಿತ್ರ ಅಕಾಡೆಮಿ-ಬಿ.ಡಿ.ಎ ಚಲನಚಿತ್ರ ಭಂಡಾರ” ಸ್ಥಾಪನೆಗೆ ಚಾಲನೆ ನೀಡಿದ್ದಾರೆ.

ಈ ಚಲನಚಿತ್ರ ಭಂಡಾರವನ್ನು ನಂದಿನಿ ಲೇಔಟ್‍ನ ಕರ್ನಾಟಕ ಚಲನಚಿತ್ರ ಅಕಾಡೆಮಿ ಕಛೇರಿ ಇರುವ ಕನ್ನಡ ಚಲನಚಿತ್ರ ಅಮೃತೋತ್ಸವ ಭವನದ ನೆಲ ಮಹಡಿಯಲ್ಲಿ ಸ್ಥಾಪಿಸಲಾಗುತ್ತಿದೆ. ಇದಕ್ಕೆ ಸರ್ಕಾರ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಒಪ್ಪಿಗೆ ನೀಡಿದೆ.

ಭಂಡಾರ ಸ್ಥಾಪನೆ ಸಲುವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಆರ್ಥಿಕ ನೆರವು ಕೋರಲಾಗಿದ್ದು, ಉತ್ತಮ ರೀತಿಯಲ್ಲಿ ಸ್ಪಂದಿಸಿದ ಪ್ರಾಧಿಕಾರವು 9 ವರ್ಷಗಳ ಹಿಂದೆಯೇ 1.00 ಕೋಟಿ ಅನುದಾನವನ್ನು ಅಕಾಡೆಮಿಗೆ ನೀಡಿದ್ದು, ಇದನ್ನು ನಿಶ್ಚಿತ ಠೇವಣಿಯಲ್ಲಿ ತೊಡಗಿಸಿ ಇದರಿಂದ ಬರುವ ಬಡ್ಡಿ ಹಣದಿಂದ ಚಲನಚಿತ್ರ ಭಂಡಾರದ ನಿರ್ವಹಣೆ ಮಾಡಲು ಕರಾರು ಮಾಡಿಕೊಂಡಿದೆ.

ಅಂತೆಯೇ ಚಲನಚಿತ್ರ ಭಂಡಾರವನ್ನು ಯಾವ ರೀತಿ ಸಜ್ಜುಗೊಳಿಸಬೇಕೆಂಬ ಬಗ್ಗೆ ಸಲಹೆ ಅಭಿಪ್ರಾಯಕ್ಕಾಗಿ ಪರಿಣಿತರ ಸಲಹೆ ಪಡೆಯಲಾಗಿದ್ದು, ಇವರನ್ನು ಒಳಗೊಂಡ “ಕರ್ನಾಟಕ ಚಲನಚಿತ್ರ ಅಕಾಡೆಮಿ-ಬಿ.ಡಿ.ಎ ಚಲನಚಿತ್ರ ಭಂಡಾರ” ಸಲಹಾ ಸಮಿತಿಯನ್ನು ರಚಿಸಲಾಗಿದೆ. ಸದರಿ ಸಲಹಾ ಸಮಿತಿಯು ಈಗಾಗಲೇ ಎರಡು ಬಾರಿ ಸಭೆ ಸೇರಿ ಹಲವಾರು ಸಲಹೆ ಅಭಿಪ್ರಾಯಗಳನ್ನು ನೀಡಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!