Entertainment

ಮತ್ತೆ ಚಿತ್ರಮಂದಿರಗಳಲ್ಲಿ ಆದಿ-ನಿಧಿ ಲವ್ ಸ್ಟೋರಿ ‘ಲವ್ ಮಾಕ್ಟೇಲ್’ ಬಿಡುಗಡೆ

ಬೆಂಗಳೂರು, ಅ 08- ಇದೇ 15 ರಿಂದ ಚಿತ್ರಮಂದಿರಗಳ ಕಾರ್ಯಾರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಸ್ಯಾನಿಟೈಸೇಶನ್, ಪ್ರೇಕ್ಷಕರ ಥರ್ಮಲ್ ಸ್ಕ್ರೀನಿಂಗ್ ಸೇರಿದಂತೆ ಸುಮಾರು 24 ನಿಯಮಗಳ ಅನುಷ್ಠಾನದೊಂದಿಗೆ ಚಿತ್ರ ಪ್ರದರ್ಶನಕ್ಕೆ ಅವಕಾಶವಿದೆ.

ಸಿನಿಮಾಗೆ ಕೇವಲ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅನುಮತಿ ಇರುವ ಕಾರಣ ಸ್ಟಾರ್ ನಟರ ಅಭಿನಯದ ಸಿನಿಮಾ ಬಿಡುಗಡೆಗೆ ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ. ಆದರೆ ಈ ಸಂದರ್ಭವನ್ನು ಬಳಸಿಕೊಂಡು ಮರು ಬಿಡುಗಡೆಯಾಗುತ್ತಿರುವ ಚಿತ್ರಗಳಲ್ಲಿ ‘ಲವ್ ಮಾಕ್ಟೇಲ್’ ಕೂಡ ಸೇರಿದೆ.

ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಲವ್ ಮೋಕ್ಟೆಲ್’ ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಅಕ್ಟೋಬರ್ 16 ರಂದು ಆದಿ-ನಿಧಿ ಪ್ರೇಮ್ ಕಹಾನಿ ದೊಡ್ಡ ಪರದೆಗೆ ಪುನಃ ಬರಲಿದೆ ಎಂದು ನಿರ್ದೇಶಕ, ನಿರ್ಮಾಪಕ ಡಾರ್ಲಿಂಗ್ ಕೃಷ್ಣ ತಿಳಿಸಿದ್ದಾರೆ. ಸಿನಿಮಾವನ್ನು ಮರು ಬಿಡುಗಡೆ ಮಾಡುತ್ತಿರುವುದಕ್ಕೆ ಸಾಕಷ್ಟು ಮಂದಿ ಸಂತಸ ವ್ಯಕ್ತಪಡಿಸಿದ್ದಾರೆ.

ಜನವರಿ 31 ರಂದು ಲವ್ ಮೋಕ್ಟೆಲ್ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡು ಉತ್ತಮ ವಿಮರ್ಶೆ ಪಡೆದಿತ್ತಾದರೂ, ಸಾಧಾರಣ ಹಿಟ್ ಕಂಡಿತ್ತು.

ಲಾಕ್‌ಡೌನ್ ಬಂದ ಕಾರಣ ಲವ್ ಮಾಕ್ಟೆಲ್ ಹೆಚ್ಚು ಕಾಲ ಚಿತ್ರಮಂದಿರದಲ್ಲಿರದ ಲವ್ ಮಾಕ್ಟೆಲ್ ಅನ್ನು ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಮಾಡಲಾಯಿತು. ಲಕ್ಷಾಂತರ ಮಂದಿ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿ ಮರು ಬಿಡುಗಡೆ ಒತ್ತಾಯಿಸಿದ್ದರು. ಹೀಗಾಗಿ ಇದೀಗ ಲವ್ ಮೋಕ್ಟೆಲ್ ಸಿನಿಮಾ ಮರು ಬಿಡುಗಡೆ ಆಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!