Raibag

ಆಸ್ತಿ ಜಗಳ; ಮಗನನ್ನು ಕೊಂದ ತಂದೆ

ರಾಯಬಾಗ, ೮- ಆಸ್ತಿ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ 80 ವರುಷ ವಯಸ್ಸಿನ ವ್ಯಕ್ತಿಯೊಬ್ಬ ತನ್ನ 38 ವರುಷದ ಮಗನನ್ನು ಹತ್ಯೆ ಮಾಡಿದ ಘಟನೆ ರಾಯಭಾಗ ತಾಲೂಕಿನಲ್ಲಿ ಬುಧವಾರ ಸಂಭವಿಸಿದೆ.

ಚನ್ನಪ್ಪ ಅಂಜುರೆ ಎಂಬ ತಂದೆ ತನ್ನ ಮಗ ಅಲಗೌಡ ರಾತ್ರಿ ಮನೆಯಲ್ಲಿ ಮಲಗಿದ್ದಾಗ, ಸುಮಾರು ಮಧ್ಯರಾತ್ರಿ 3 ಗಂಟೆಯ ಹೊತ್ತಿಗೆ ದೊಡ್ಡ ಕಲ್ಲೊಂದನ್ನು ತಲೆಯ ಮೇಲೆ ಹಾಕಿ ನಂತರ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಕೊಲೆಯಾದ ಮಗ ಖಣದಾಳ ಗ್ರಾಮದಲ್ಲಿರುವ ತಂದೆಯ ಮನೆಯ ಹೊರ ಜಗುಲಿಯಲ್ಲಿ ಮಲಗಿದ್ದ.

ತಂದೆ ಮಗನ ನಡುವೆ ಆಸ್ತಿ ಹಂಚಿಕೆ ಕುರಿತು ಆಗಾಗ ವಾದವಾಗುತಿತ್ತು, ಗ್ರಾಮದ ಮುಖ್ಯಸ್ಥರು ಅದನ್ನು ಪರಿಹರಿಸುತ್ತಿದ್ದರು. ನಿನ್ನೆ ರಾತ್ರಿ ಕೂಡ ಈ ವಿಷಯದ ಕುರಿತು ತಂದೆ ಮಗನ ಮಧ್ಯೆ ಜಗಳವಾಗಿತ್ತು.

ಮೃತ ಅಲಗೌಡರಿಗೆ ಇಬ್ಬರು ಪತ್ನಿಯರಿದ್ದು ಐದು ಮಕ್ಕಳಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!