New Delhi

ನಕಲಿ ವಿಶ್ವವಿದ್ಯಾಲಯಗಳ ಹಾವಳಿ

ನವದೆಹಲಿ, ಅ 7 -ದೇಶದ 24 ವಿಶ್ವವಿದ್ಯಾಲಯಗಳು ಮಾನ್ಯತೆ ಇಲ್ಲದ ವಿಶ್ವವಿದ್ಯಾಲಯಗಳಾಗಿವೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಘೋಷಿಸಿದೆ.

ಇಂತಹ ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದರೇ, ದೆಹಲಿಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂಬುದಾಗಿ ಯುಜಿಸಿ ತಿಳಿಸಿದೆ.

‘ಯುಜಿಸಿ ಕಾಯ್ದೆಗೆ ವಿರುದ್ಧವಾಗಿ 24 ಸ್ವಯಂ ಘೋಷಿತ, ಮಾನ್ಯತೆ ಇಲ್ಲದ 24 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ನಕಲಿ ವಿಶ್ವವಿದ್ಯಾಲಯಗಳು ಎಂದು ಘೋಷಿಸಲಾಗಿದ್ದು, ಯಾವುದೇ ಪದವಿ ಪ್ರಧಾನ ಮಾಡುವ ಅಧಿಕಾರ ಇಲ್ಲ’ ಎಂದು ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ತಿಳಿಸಿದ್ದಾರೆ.

ಈ ಪೈಕಿ ಎಂಟು ವಿಶ್ವವಿದ್ಯಾಲಯಗಳು ಉತ್ತರ ಪ್ರದೇಶ, ದೆಹಲಿ ಏಳು ಮತ್ತು ಒಡಿಶಾ ಮತ್ತು ಪಶ್ಚಿಮ ಬಂಗಾಳ ತಲಾ ಎರಡು ವಿಶ್ವವಿದ್ಯಾಲಯಗಳನ್ನು ಹೊಂದಿದೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪುದುಚೇರಿ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಂದು ನಕಲಿ ವಿಶ್ವವಿದ್ಯಾಲಯವಿದೆ ಎಂದು ಅವರು ಹೇಳಿದ್ದಾರೆ .

Related Articles

Leave a Reply

Your email address will not be published. Required fields are marked *

Back to top button
error: Content is protected !!