Chandigarh

ರೈತರ ಪ್ರತಿಭಟನೆ: ಯೋಗೇಂದ್ರ ಯಾದವ ಬಂಧನ

ಚಂಡೀಗಢ, ಅ 7- ಕೇಂದ್ರದ ಕೃಷಿ ತಿದ್ದುಪಡಿ ಮಸೂದೆ ವಿರೋಧಿಸಿ ಹರಿಯಾಣದ ಸಿರ್ಸದಲ್ಲಿ ಬುಧವಾರ ರೈತರು ನಡೆಸಿದ ಪ್ರತಿಭಟನೆಯಲ್ಲಿ ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಹಾಗೂ ಸುಮಾರು 100 ರೈತರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ದಸರಾ ಮೈದಾನದಲ್ಲಿ ಅಥವಾ ಜಿಲ್ಲಾಧಿಕಾರಿ ಕಚೇರಿ ಬಳಿ ರೈತರಿಗೆ ಪ್ರತಿಭಟನೆಗೆ ಅವಕಾಶ ನೀಡಲಾಗಿತ್ತು. ಆದರೆ ಯೋಗೇಂದ್ರ ಯಾದವ್, ಹರಿಯಾಣ ಕಿಸಾನ್ ಮಂಚ್ ಮುಖ್ಯಸ್ಥ ಪ್ರಹ್ಲಾದ್ ಸಿಂಗ್ ಹಾಗೂ ರೈತರು ಸಿರ್ಸ ಹೆದ್ದಾರಿಯಲ್ಲಿ ಧರಣಿ ಕುಳಿತು ರಸ್ತೆ ಸಂಚಾರಕ್ಕೆ ತಡೆಯೊಡ್ಡಿದ್ದರಿಂದ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಿರ್ಸದಲ್ಲಿ ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಜೊತೆ ಸೇರಿದ್ದಕ್ಕೆ ತನ್ನನ್ನು ಹಾಗೂ 100ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿರುವುದಾಗಿ ಯಾದವ್ ಟ್ವಿಟರ್ ಮೂಲಕ ತಿಳಿಸಿದ್ದಾರೆ. ರೈತರ ಪ್ರಶ್ನೆಗಳಿಗೆ ಉತ್ತರಿಸಲಾಗದ ಹರಿಯಾಣ ಸರಕಾರ ಬಲಪ್ರಯೋಗದ ಮೂಲಕ ರೈತರ ದಮನಕ್ಕೆ ಪ್ರಯತ್ನಿಸಿದೆ. ಆದರೂ ರೈತರ ಪ್ರತಿಭಟನೆ ಮುಂದೆ ದೊಡ್ಡದಾಗಲಿದೆ ಎಂದವರು ಮತ್ತೊಂದು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!