Kalaburagi

32 ಕೆಜಿ ಗಾಂಜಾ ವಶ: ಓರ್ವನ ಬಂಧನ

ಕಲಬುರಗಿ, ಅ. 7- ಅಕ್ರಮವಾಗಿ ಜಮೀನಿನಲ್ಲಿ ಬೆಳೆದಿದ್ದ 32 ಕೆಜಿ ಗಾಂಜಾವನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯ ಚಿಂಚೋಳಿ ತಾಲೂಕಿನ ಪತಪಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ವಶಪಡಿಸಿಕೊಂಡು ಓರ್ವನನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.

ಪತಪಳ್ಳಿ ಗ್ರಾಮದ ನಿವಾಸಿ ಭೀಮರೆಡ್ಡಿ ಬಂಧಿತ ಆರೋಪಿ. ಬಂಧಿತನಿಂದ ಜಮೀನಿನ ಬೆಳೆಗಳಲ್ಲಿ ಬೆಳೆದಿದ್ದ 1.4 ಲಕ್ಷ ರೂ. ಮೌಲ್ಯದ 32 ಕೆಜಿ ಗಾಂಜಾ ಗಿಡ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ಸ್ ಪೆಕ್ಟರ್ ಮಲ್ಲಿಕಾರ್ಜುನ ಹನಗಂದಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಚಿಂಚೋಳಿ ಅಬಕಾರಿ ವಲಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!