Bengaluru

ಗುತ್ತಿಗೆ ವೈದ್ಯರು ,ಹೊರಗುತ್ತಿಗೆ ನೌಕರರು ಕರ್ತವ್ಯಕ್ಕೆ ಹಾಜರು

ಬೆಂಗಳೂರು,ಸೆ. 7- ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಕರ್ತವ್ಯಕ್ಕೆ ಮರಳಿದ್ದಾರೆ.ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅವರ ಬೇಡಿಕೆಗಳಿಗೆ ಸರ್ಕಾರ ಪೂರಕವಾಗಿ ಸ್ವಂದಿಸಲಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ 14ದಿನಗಳಿಂದ ನಡೆಸುತ್ತಿದ್ದ ವೈದ್ಯಕೀಯ ಗುತ್ತಿಗೆ ನೌಕರರು ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಕೆಲಸ ಸ್ಥಗಿತ ಹೋರಾಟ ಮುಷ್ಕರ ಆರೋಗ್ಯ ಸಚಿವ ಬಿ.ಶ್ರೀರಾಮುಲು ಭರವಸೆ ಹಿನ್ನೆಲೆಯಲ್ಲಿ ಇಂದು ತಾತ್ಕ್ಕಲಿಕವಾಗಿ ಸ್ಥಗಿತಮಾಡಿ ಒಂದು ತಿಂಗಳ ಕಾಲ ಮುಂದೂಡಲಾಗಿದೆ. ಸರ್ಕಾರದ ಪರವಾಗಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ರವರ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಕೆಲವು ಪ್ರಮುಖ ಬೇಡಿಕೆಗಳ ಮೇಲೆ ಆದೇಶಗಳ ನ್ನು ಹೊರಡಿಸಿ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಒಂದು ತಿಂಗಳಸಮಯ ತೆಗೆದುಕೊಂಡಿರುವ ಹಿನ್ನಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಚಾಲ್ತಿ ಯಲ್ಲಿರುವ ಮುಷ್ಕರವನ್ನು ಒಂದು ತಿಂಗಳ ಕಾಲ ಮುಂದೂಡಲಾಗಿದೆ ಎಂದು ಸಂಘದ ಅಧ್ಯಕ್ಷ ವಿಶ್ವಾರಾಧ್ಯ ಎಚ್ ಯಾಮೋಜಿ ತಿಳಿಸಿದ್ದಾರೆ.

ನಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ನೀಡಿರುವ ಒಂದು ತಿಂಗಳ ಕಾಲ ಗಡುವಿನ ಭರವಸೆಯ ಹಿನ್ನಲೆಯಲ್ಲಎಲ್ಲಾ ನೌಕರರು ನಾಳೆಯ ಒಳಗೆ ಕರ್ತವ್ಯ ಕ್ಕೆ ಹಾಜರಾಗಲು ರಾಜ್ಯ ಸಮಿತಿಯು ಒಮ್ಮತದ ನಿರ್ಣಯ ಮಾಡಿದೆಮತ್ತು ಈ ನಿರ್ಧಾರಕ್ಕೆ ಎಲ್ಲರಿಗೂ ಬದ್ದರಾಗಲು ಸೂಚಿಸಿದೆ ಎಂದು ಹೇಳಿದ್ದಾರೆ.

ನಿನ್ನೆ ಸಚಿವ ಶ್ರೀರಾಮುಲು ಹಾಗೂ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಘದ ಅಧಿಕೃತ ಮುಷ್ಕರ ದ ದಿನಗಳಲ್ಲಿ ಕಡಿತವಾದ ವೇತನವನ್ನು ಪಾವತಿಸಲು ಕ್ರಮಕೈಗೊಳ್ಳಲು ಒಪ್ಪಲಾಯಿತು ಮತ್ತು ಮುಷ್ಕರದ ಸಮಯದಲ್ಲಿ ಸೇವೆಯಿಂದ ವಜಾಗೊಂಡಿ ರುವ, ನೋಟಿಸ್ ನೀಡಿರುವುದನ್ನು ಹಿಂಪಡೆಯಲು ಒಪ್ಪಿಗೆ ಸೂಚಿಸಲಾಗಿದೆ.

ಕರೋನಾ ಸಂದರ್ಭದಲ್ಲಿ ಮೃತಪಟ್ಟ ಇಲಾಖಾ ಗುತ್ತಿಗೆ, ಹೊರಗುತ್ತಿಗೆ ನೌಕರರ ಕುಟುಂಬಗಳಿಗೆ 50 ಲಕ್ಷ ಪರಿಹಾರ ಮತ್ತು ಕೇಂದ್ರ ಸರ್ಕಾರದ ವಿಮೆ ಕವರ್ ಆಗದಿದ್ದರೆ 30 ಲಕ್ಷ ಪರಿಹಾರ ವನ್ನು ನ್ಯಾಯಸಮ್ಮತವಾಗಿ ವಿಶೇಷ ಸಂದರ್ಭ ಎಂದು ಪರಿಗಣಿಸಿ ಇತರೆ ಸೌಲಭ್ಯಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಕೋವಿಡ್ ಆಪತ್ತು ಪ್ರೋತ್ಸಾಹಧನ ಎಲ್ಲಾ ಗುತ್ತಿಗೆ, ಹೊರಗುತ್ತಿಗೆ ಕೋವಿಡ್ ವಾರಿಯರ್ಸ್’ ನೌಕರರಿಗೂ ಜಾರಿಗೊಳಿಸಿ ನೌಕರರ ಆತ್ಮಸ್ಥೈರ್ಯ ಹಾಗೂ ಹುರುಪು/ಹುಮ್ಮಸ್ಸು ಹೆಚ್ಚಿಸಲು ಕೈಗೊಳ್ಳವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.ರಾಷ್ಟ್ರೀಯ ಆರೋಗ್ಯ ಅಭಿಯಾನದ ನೌಕರರ ಹೆಚ್ ಆರ್ ಒಪಿ 2020-21 ನಲ್ಲಿನ ನ್ಯೂನತೆಗಳನ್ನು ಸರಿಪಡಿಸುವುದು ಮತ್ತು ಪ್ರಸ್ತುತ ನೀಡು ತ್ತಿರುವ ವೇತನಕ್ಕಿಂತ ಕಡಿಮೆ ವೇತನ ನಿಗಧಿಪಡಿಸಿರುವುದನ್ನು ಕೂಡಲೆ ಹಿಂಪಡೆಯು ವುದು ಮತ್ತು ನಿಯಮದಂತೆ ವಾರ್ಷಿಕ ವೇತನ ಹೆಚ್ಚಳವನ್ನು ನೀಡುವುದು. ಬಾಕಿ ಇರುವ (ಹಿಂದಿನ ವರ್ಷಗಳ ಮತ್ತು ಪ್ರಸ್ತುತ ವರ್ಷದ) ಬೋನಸ್’ಅನ್ನು ನೀಡುವುದು ಮತ್ತು ಈಗಾಗಲೇ ನೀಡಿರುವ ಬೋನಸ್’ಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಅಧ್ಯಕ್ಷ ವಿಶ್ವರಾಧ್ಯ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!