BelagaviBengaluru

ಮಹದಾಯಿ ನದಿ ನೀರು ಹಂಚಿಕೆ ಗೋವಾದಿಂದ ಅನಗತ್ಯ ವಿವಾದ, ಕಾಮಗಾರಿ ಆರಂಭಿಸಿ

ಬೆಂಗಳೂರು,ಸೆ 07- ಮಹದಾಯಿ ನದಿ ನೀರು ಬಳಕೆ ವಿಚಾರದಲ್ಲಿ ಗೋವಾ ಮತ್ತೆ ತಗಾದೆ ತೆಗೆದಿರು ವುದು ಸರಿಯಲ್ಲ ಎಂದು ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು,ಗೋವಾ ರಾಜ್ಯವು ಅನಗತ್ಯ ಆರೋಪ ಮಾಡುತ್ತಿದೆ.ಮಹ ದಾಯಿ ನ್ಯಾಯಾಧೀಕರಣ ರಾಜ್ಯಕ್ಕೆ ೧೩.೪೨ ಟಿಎಂಸಿ ನೀರು ಹಂಚಿಕೆ ಮಾಡಿದೆ.ನಮಗೆ ಇಷ್ಟು ನೀರು ಹಂಚಿದ ಮೇಳೆ ನೀರು ಕದಿಯುವ ಅಗತ್ಯ ನಮಗಿಲ್ಲ.ಮಹದಾಯಿ ಯೋಜನೆಯ ಕಾಮಗಾರಿಯನ್ನು ರಾಜ್ಯ ಸರ್ಕಾರ ಶೀಘ್ರ ಆರಂಭಿಸಬೇಕು.ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಬೇಕು ಎಂದು ಅವರು ಆಗ್ರಹಿಸಿದರು.

ಗೋವಾ ರಾಜ್ಯದ ಮುಖ್ಯಮಂತ್ರಿ ರಾಜ್ಯದ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ.ಕರ್ನಾಟಕ ಕಾನೂ ನು ಪ್ರಕಾರವೇ ನಡೆದುಕೊಳ್ಳಲಾಗುತ್ತಿದೆ. ಕೇಂದ್ರದ ಬಿಜೆಪಿ ನಾಯಕರು ಗೋವಾ ಮುಖ್ಯಮಂತ್ರಿ ತಮ್ಮ ಪಕ್ಷದ ಪ್ರಮೋದ ಸಾವಂತ ಅವರನ್ನು ಕರೆಸಿ ಬುದ್ದಿ ಹೇಳಬೇಕು. ರಾಜ್ಯ ಸರ್ಕಾರ ಕಾಮಗಾರಿಗೆ ತಡ ಮಾಡಿದಷ್ಟು ಗೋವಾ ಇದೇ ರೀತಿ ಕ್ಯಾತೆ ತೆಗೆಯುತ್ತಿರುತ್ತದೆ. ಹೀಗಾಗಿ ಮಹದಾಯಿ ಯೋಜನೆಯನ್ನು ರಾಜ್ಯ ಸರ್ಕಾರ ತಕ್ಷಣ ಆರಂಭಿಸಬೇಕು ಎಂದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!