Kalaburagi

ಈಶಾನ್ಯ ಪದವೀಧರ ಶಿಕ್ಷಕರ ಚುನಾವಣೆ: ಬಿಜೆಪಿಯಿಂದ ನಮೋಶಿ, ಕಾಂಗ್ರೆಸ್ ನಿಂದ ಮಟ್ಟೂರು ನಾಮಪತ್ರ ಸಲ್ಲಿಕೆ

ಕಲಬುರಗಿ, ಅ. 7 – ವಿಧಾನ ಪರಿಷತ್ ನ ಈಶಾನ್ಯ ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಶಶೀಲ್ ನಮೋಶಿ ಬುಧವಾರ ನಾಮಪತ್ರ ಸಲ್ಲಿಸಿದರು.

ನಗರದ ಮಿನಿ ವಿಧಾನಸೌಧದಲ್ಲಿ ಚುನಾವಣಾಧಿಕಾರಿ ಹಾಗೂ ಕಲಬುರಗಿ ಪ್ರಾದೇಶಿಕ ಆಯುಕ್ತ ಎನ್‌ ವ್ಹಿ ಪ್ರಸಾದ್‌ ಅವರಿಗೆ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ‌ಗ್ರಾಮೀಣಾಭಿವೃದ್ಧಿ ಸಚಿವ‌ ಕೆಎಸ್ ಈಶ್ವರಪ್ಪ, ಶಾಸಕರಾದ ಬಸವರಾಜ್ ಮತ್ತಿಮೂಡ್, ದತ್ತಾತ್ರೇಯ ಪಾಟೀಲ್ ರೇವೂರ್ ಅವರು ಉಪಸ್ಥಿತರಿದ್ದರು.

ಇನ್ನು, ಕಾಂಗ್ರೆಸ್ ಅಭ್ಯರ್ಥಿಯಾಗಿ ಶರಣಪ್ಪ ಮಟ್ಟೂರ್ ಅವರು ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಎನ್ ವ್ಹಿ ಪ್ರಸಾದ್‌ ಅವರಿಗೆ ಅವರು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಪ್ರಿಯಾಂಕ ಖರ್ಗೆ, ಡಾ. ಅಜಯಸಿಂಗ್ ಉಪಸ್ಥಿತರಿದ್ದರು.

ಇದೇ ತಿಂಗಳು ಅ.28ಕ್ಕೆ ಚುನಾವಣೆ ಜರುಗಲಿದ್ದು, ನ.2ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ.

ಈಶಾನ್ಯ ಕರ್ನಾಟಕ ಶಿಕ್ಷಕ ಕ್ಷೇತ್ರದ ವ್ಯಾಪ್ತಿಯು ಕಲಬುರಗಿ ವಿಭಾಗದ ಕೊಪ್ಪಳ, ಬಳ್ಳಾರಿ, ಕಲಬುರಗಿ, ಬೀದರ, ಯಾದಗಿರಿ, ರಾಯಚೂರು ಜಿಲ್ಲೆಗಳಿಗೆ ಹೊಂದಿಕೊಂಡಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!