Sports

ನಿಧಾನಗತಿಯ ಓವರ್‌ ರೇಟ್‌: ಸ್ಟೀವನ್‌ ಸ್ಮಿತ್‌ಗೆ 12 ಲಕ್ಷ ರೂ. ದಂಡ

ನವದೆಹಲಿ, ಅ 7 – ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ 57 ರನ್‌ಗಳ ಭಾರಿ ಅಂತರದಲ್ಲಿ ರಾಜಸ್ಥಾನ ರಾಯಲ್ಸ್ ಸೋಲು ಅನುಭವಿಸಿತ್ತು. ಆ ಮೂಲಕ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್ ಹ್ಯಾಟ್ರಿಕ್‌ ಪರಾಭವ ಅನುಭವಿಸಿತು.

ಮುಂಬೈ ಇಂಡಿಯನ್ಸ್ ಇನಿಂಗ್ಸ್‌ನಲ್ಲಿ ನಿಧಾನಗತಿಯ ಬೌಲಿಂಗ್‌ ಮಾಡಿದ ಕಾರಣದಿಂದ ರಾಜಸ್ಥಾನ್‌ ರಾಯಲ್ಸ್ ತಂಡ ನಾಯಕ ಸ್ಟೀವನ್‌ ಸ್ಮಿತ್‌ಗೆ ದಂಡ ವಿಧಿಸಲಾಗಿದೆ. 20 ಓವರ್‌ಗಳನ್ನು ರಾಜಸ್ಥಾನ್‌ ರಾಯಲ್ಸ್ ನಿಗದಿತ ಸಮಯದಲ್ಲಿ ಮುಗಿಸಿಲ್ಲ. ಪ್ರಸ್ತುತ ಆವೃತ್ತಿಯು ಸ್ಮಿತ್‌ ಪಡೆಗೆ ಮೊದಲ ನಿಧಾನಗತಿಯ ಓವರ್‌ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಸ್ಟೀವನ್‌ ಸ್ಮಿತ್‌ಗೆ 12 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ.

“ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿದ ಐಪಿಎಲ್ ನ ನೀತಿ ಸಂಹಿತೆಯ ಅಡಿಯಲ್ಲಿ ಇದು ತಂಡದ ಮೊದಲ ಅಪರಾಧವಾದ್ದರಿಂದ, ನಾಯಕ ಸ್ಟೀವನ್‌ ಸ್ಮಿತ್ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಯಿತು” ಎಂದು ಐಪಿಎಲ್ ಮಾಧ್ಯಮ ಪ್ರಕಟಣೆ ತಿಳಿಸಿದೆ.

ಐಪಿಎಲ್‌ 2020ರ ಟೂರ್ನಿಯಲ್ಲಿ ಆರಂಭಿಕ ಎರಡು ಪಂದ್ಯಗಳಲ್ಲಿ ಸತತ ಜಯ ದಾಖಲಿಸಿದ್ದ ರಾಜಸ್ಥಾನ್‌ ರಾಯಲ್ಸ್ ನಂತರ ಹ್ಯಾಟ್ರಿಕ್‌ ಸೋಲು ಅನುಭವಿಸಿದೆ. ಸ್ಟೀವನ್ ಸ್ಮಿತ್‌ ಬಳಗ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಹಿನ್ನಡೆ ಅನುಭವಿಸುತ್ತಿದೆ. ಈ ಕಾರಣದಿಂದ ಹಾಲಿ ಚಾಂಪಿಯನ್ಸ್ ವಿರುದ್ಧ ಮಾಜಿ ಚಾಂಪಿಯನ್ಸ್ ಪ್ರಾಬಲ್ಯ ಸಾಧಿಸುವಲ್ಲಿ ವಿಫಲವಾಯಿತು.

ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ರಾಯಲ್ಸ್ ನಿಗದಿತ 20 ಓವರ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು 193 ರನ್‌ಗಳನ್ನು ದಾಖಲಿಸಿತು. ಆರಂಭಿಕರಾದ ರೋಹಿತ್‌ ಶರ್ಮಾ ಹಾಗೂ ಕ್ವಿಂಟನ್‌ ಡಿ ಕಾಕ್‌ ಆರಂಭಿಕ 5 ಓವರ್‌ಗಳ ಒಳಗಾಗಿ 49 ರನ್‌ಗಳನ್ನು ದಾಖಲಿಸಿತ್ತು. ನಂತರ ಐಪಿಎಲ್‌ ಪದಾರ್ಪಣೆ ಪಂದ್ಯದಲ್ಲಿ ಕಾರ್ತಿಕ್‌ ತ್ಯಾಗಿ, ಕ್ವಿಂಟನ್‌ ಡಿ ಕಾಕ್‌ ಅವರ ವಿಕೆಟ್‌ ಕಬಳಿಸಿದರು.

ಇದರ ಬೆನ್ನಲ್ಲೆ ನಾಯಕ ರೋಹಿತ್‌ ಶರ್ಮಾ, ಇಶಾನ್‌ ಕಿಶನ್‌ ಅವರ ವಿಕೆಟ್‌ಗಳು ಉರುಳಿದವು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಕೃನಾಲ್‌ ಪಾಂಡ್ಯ ಕೆಟ್ಟದಾಗಿ ವಿಕೆಟ್‌ ಒಪ್ಪಿಸಿದರು. ನಂತರ, ಹಾರ್ದಿಕ್‌ ಪಾಂಡ್ಯ(30*) ಹಾಗೂ ಸೂರ್ಯ ಕಮಾರ್‌ ಯಾದವ್‌(79*) ರಾಜಸ್ಥಾನ್‌ ರಾಯಲ್ಸ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಈ ಜೋಡಿ 36 ಎಸೆತಗಳಲ್ಲಿ 76 ರನ್‌ಗಳನ್ನು ದಾಖಲಿಸಿತು. ಈ ಜೋಡಿಯ ಅದ್ಭುತ ಜತೆಯಾಟದಿಂದ ರಾಜಸ್ಥಾನ್‌ ರಾಯಲ್ಸ್ ಸವಾಲಿನ ಮೊತ್ತವನ್ನು ದಾಖಲಿಸಿತು.

ಗುರಿ ಬೆನ್ನತ್ತಿದ ರಾಜಸ್ಥಾನ್‌ ರಾಯಲ್ಸ್ 18.1 ಓವರ್‌ಗಳಿಗೆ 136 ರನ್‌ಗಳಿಗೆ ಆಲೌಟ್‌ ಆಯಿತು. ಅದ್ಭುತ ಬ್ಯಾಟಿಂಗ್‌ ಮಾಡಿದ ಜೋಸ್‌ ಬಟ್ಲರ್(70) ಸ್ಫೋಟಕ ಅರ್ಧಶತಕ ಸಿಡಿಸಿದರು. ಆದರೆ, ಮತ್ತೊಂದು ತುದಿಯಲ್ಲಿ ಇವರಿಗೆ ಯಾರೂ ಬೆಂಬಲ ನೀಡಲಿಲ್ಲ. ಐದು ಪಂದ್ಯಗಳಾಡಿರುವ ರಾಜಸ್ಥಾನ್‌ ರಾಯಲ್ಸ್ ಎರಡರಲ್ಲಿ ಗೆಲುವು ಪಡೆದಿದ್ದು, ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!