Belagavi

ಸುವರ್ಣಸೌಧದೆದುರು ಅ 24 ರಂದು ಪಂಚಮಸಾಲಿ ಸಮುದಾಯದ ಸತ್ಯಾಗ್ರಹ

ಬೆಳಗಾವಿ, ೭- ಕೇಂದ್ರ ಸರಕಾರ ಪಂಚಮಸಾಲಿ ಸಮುದಾಯ ಹೊರತು ಪಡಿಸಿ ಬೇರೆಲ್ಲ ಸಮುದಾಯಗಳಿಗೆ ಆದ್ಯತೆ ನೀಡುತ್ತಿದೆ. ಸರಕಾರದ ಈ ತಾರತಮ್ಯ ಖಂಡಿಸಿ ಪಂಚಮಸಾಲಿ ಸಮುದಾಯ ಅಕ್ಟೋಬರ್ 24 ರಂದು ಬೆಳಗಾವಿಯ ಸುವರ್ಣ ವಿಧಂಸೌಧದೆದುರು ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ಮಾಡಲಿದೆಯೆಂದು ಕೂಡಲಸಂಗಮ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಖಿಲ ಭಾರತ ಪಂಚಮಸಾಲಿ ಹಕ್ಕೋತ್ತಾಯ ಸಮಿತಿ ರಚನೆ ಮಾಡಿಕೊಂಡು ಸಮುದಾಯದ ಹಕ್ಕೋತ್ತಾಯಕ್ಕಾಗಿ ತಾವೂ ಸೇರಿದಂತೆ ಸಮುದಾಯದ ತುಂಬಾ ಜನ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ. ಕೋವಿಡ್-19 ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಧರಣಿ ನಡೆಸಲಾಗುವುದು.
ಸಮುದಾಯದ ಕುರಿತು ಸರಕಾರದ ಗಮನ ಸೆಳೆಯುವದೇ ಸತ್ಯಾಗ್ರಹದ ಉದ್ದೇಶವೆಂದು ತಿಳಿಸಿದರು.

ಉತ್ತರ ಕರ್ನಾಟಕದಲ್ಲಿ ಪಂಚಮಸಾಲಿ ಸಮುದಾಯ ಪ್ರಬಲವಾಗಿದೆ. ಜನಸಂಖ್ಯೆ ಹೆಚ್ಚಿದೆ. ಸಮುದಾಯದ ಮೂಲ ಕಸಬೂ ಕೃಷಿ. ಕೇಂದ್ರ ಸರಕಾರ ಅನೇಕ ಸಮುದಾಯದಗಳಿಗೆ ಸೌಲಭ್ಯ ನೀಡುತ್ತಿದೆ. ಆದರೆ ಪಂಚಮಸಾಲಿ ಸಮುದಾಯಕ್ಕೆ ಯಾವುದೇ ಸೌಲಭ್ಯ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಂಚಮಸಾಲಿ‌ ಸಮುದಾಯದವರು ಎಂದಿಗೂ ಯಾವದಕ್ಕೂ ಕೈ ಚಾಚಿದವರಲ್ಲ, ಕೈ ನೀಡಿ ಕೊಡುವದಷ್ಟೇ ಗೊತ್ತು. ಕೇಂದ್ರ ಸರಕಾರ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸಬೇಕಿದೆ ಎಂದರು.

ಸುವರ್ಣ ವಿಧಾನಸೌಧದ ಎದುರು ಸಂಗೊಳ್ಳಿ ರಾಯಣ್ಣ, ರಾಣಿ ಚನ್ನಮ್ಮಳ ಮೂರ್ತಿ ಸ್ಥಾಪನೆ ಸೇರಿದಂತೆ ಪಂಚಮಸಾಲಿ ಸಮಾಜದ ಬೇಡಿಕೆ ಈಡೇರಿಸಿಕೊಳ್ಳಲು ಹೋರಾಟ ಅನಿವಾರ್ಯ, ಬೇಡಿಕೆಗೆ ಸ್ಪಂದಿಸದಿದ್ದರೆ ರಾಜ್ಯ ಸರಕಾರದ ವಿರುದ್ಧ ಕೂಡ ಹೋರಾಟ ಉಗ್ರಗೊಳಿಸಲಾಗುವುದು ಎಂದು ಹೇಳಿದರು.

ಬಸವರಾಜ ರೊಟ್ಟಿ, ರಾಜಶೇಖರ ಮೆಣಸಿನಕಾಯಿ, ರುದ್ರಣ್ಣ ಚಂದರಗಿ, ಮಹಾಂತೇಶ ಹಳ್ಳೂರು, ಡಾ. ರವಿ ಪಾಟೀಲ, ಬಸನಗೌಡ ಚಿಕ್ಕನಗೌಡರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!