Bengaluru

ಸೈಬರ್ ಅಪರಾಧ – ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲೇ ಇದೆ

ಬೆಂಗಳೂರು,ಅ 06-ಯಾವುದೇ ಕಾರಣಕ್ಕೂ ನಿಮ್ಮ ಓಟಿಪಿ ನಂಬರಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.ಇದನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ನಿಮ್ಮ ಎಷ್ಟೋ ಸೈಬರ್ ಸಮಸ್ಯೆಗೆ ಕಡಿವಾಣ ಹಾಕಿದಂತೆ ಎಂದು ಸಿಐಡಿಯ ಪೊಲೀಸ್ ಅಧೀಕ್ಷಕ ಶರತ್ ಕಿವಿಮಾತು ಹೇಳಿದರು.

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಬೆಂಗಳೂರಿನ ಪ್ರೆಸ್ ಇನ್ಫರ್ಮೇಶನ್ ಬ್ಯೂರೋ ಇಂದು ಆಯೋಜಿಸಿದ್ದ “ಸೈಬರ್ ಅಪರಾಧ ಮತ್ತು ಸುರಕ್ಷತೆ” ವೆಬಿನಾರ್ ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಹೆಚ್ಚಾಗಿ ವಿದ್ಯಾವಂತರೇ ಸೈಬರ್ ಕಳುವಿನ ಬಲಿಪಶುಗಳು.ನಿಮ್ಮ ಯಾವುದೇ ವೈಯಕ್ತಿಕ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ನೀವೇ ಸಮಸ್ಯೆಗೆ ಆಹ್ವಾನ ಕೊಟ್ಟಂತೆ,ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲೇ ಇದೆ ಎಂದರು.

ಹಣದ ಆಮಿಷ, ವಿದೇಶದಲ್ಲಿ ಉದ್ಯೋಗ ಇತ್ಯಾದಿ ಯಾವುದೇ ಸಂದೇಶಗಳಲ್ಲಿ ಬರುವ ಲಿಂಕ್ ಗಳನ್ನು ಬಳಸುವ ಮುನ್ನ ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದರು.

ವೆಬಿನಾರ್ ನಲ್ಲಿ ಪಾಲ್ಗೊಂಡು ಮಾತನಾಡಿದ ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ, ನಮಗೇ ಗೊತ್ತಿಲ್ಲದೆ ನಮ್ಮ ಮಾಹಿತಿ ಸೋರಿಕೆಯಾಗುತ್ತದೆ.ನಿಮಗೆ ಪರಿಚಯವೇ ಇಲ್ಲದವರಿಂದ ಫ್ರೆಂಡ್ ರಿಕ್ವೆಸ್ಟ್ ಬಂದಾಗ ವಿವೇಚಿಸಿ ಸಮ್ಮತಿಸಿ,ಯಾರೋ ನಿಮ್ಮ ಹೆಸರಿಗೆ ಇಷ್ಟು ಹಣ ಕಳುಹಿಸಿದ್ದಾರೆ ಮುಂತಾದ ಸಂದೇಶಗಳ ಬಗ್ಗೆ ಎಚ್ಚರವಿರಬೇಕು.ಪಾಸ್ವರ್ಡ್,ರೂಪಿಸುವಾಗ ನಿಮಗೆ ಸುಲಭ ವಾಗಿರಬೇಕು ಆದರೆ ಹ್ಯಾಕರ್ಸ್ಗೆ ಕಷ್ಟವಾಗುವಂತೆ ರೂಪಿಸಿಕೊಳ್ಳಿ.ಮೊಬೈಲ್ ನಲ್ಲಿ ಪ್ರಮುಖ ಮಾಹಿತಿ ಅಡಕ ಮಾಡುವ ಮುನ್ನ ಆಲೋಚಿಸಿ.ನಿಮ್ಮ ನೀವೇ ಬಗ್ಗೆ ನೀಡುವ ಎಲ್ಲ ವಿವರಗಳೇ ಹ್ಯಾಕರ್ಸ್ ಗೆ ಕಳುವು ಮಾಡುವ ಅವಕಾಶ ಒದಗಿಸುತ್ತದೆ.ಸೈಬರ್ ಶುಚಿತ್ವದ ಪಾಲನೆ ಅತ್ಯಂತ ಮುಖ್ಯ ಎಂದರು.

ಸೈಬರ್ ಸುರಕ್ಷತೆ ಬಗ್ಗೆ ನಿರಂತರವಾಗಿ ತರಬೇತಿ ನೀಡುತ್ತಾ ಬಂದಿರುವ ಪ್ರಾಧ್ಯಾಪಕ ಡಾ. ಅನಂತಪ್ರಭು, ಅಂತರಜಾಲ ಬಳಕೆ ಮುನ್ನ ಪ್ರತಿಯೊಬ್ಬರಿಗೂ ಸೈಬರ್ ಕಾನೂನುಗಳ ಬಗ್ಗೆ ಅರಿವಿರಬೇಕು.ಮೊಬೈಲ್ ಮತ್ತು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಹಾಕಿದ್ದರೆ ಅದನ್ನು ಸುರಕ್ಷತವಾಗಿರಿಸಿಕೊಳ್ಳುವ ಬಗ್ಗೆ ತಿಳಿದಿರಬೇಕು. ಪ್ರೈವೆಸಿ ಸೆಟ್ಟಿಂಗ್, ಪ್ರೊಫೈಲ್ ಸೆಟ್ಟಿಂಗ್ ಲಾಕ್ ಮಾಡುವ ಕುರಿತು ಮಾಹಿತಿ ಅಗತ್ಯ.ಉಚಿತವಾಗಿ ದೊರೆಯುವ ಅ್ಯಂಟಿವೈರಸ್ ತಂತ್ರಾಂಶಗಳನ್ನು ಬಳಸದಿರಿ ಮತ್ತು ಮೊಬೈಲ್ ನಲ್ಲಿ ಅಪ್ ಡೇಟ್ ಮಾಡುವ ಕುರಿತು ಸಂದೇಶ ಬಂದಾಗ ತಪ್ಪದೆ ನಿಮ್ಮ ಆಪ್ ಗಳನ್ನು ಅಪ್ಡೇಟ್ ಮಾಡಿ, ಮಾಡದಿದ್ದರೆ ಹ್ಯಾಕರ್ಸ್ ಗೆ ನೀವೇ ಅನುಕೂಲ ಮಾಡಿಕೊಟ್ಟಂತೆ. ಯಾವುದೇ ಲಿಂಕ್ ಗಳು ಬಂದಾಗ ಬಳಸುವ ಮೊದಲು ಯೋಚಿಸಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಧ್ಯಮ ಮಿತ್ರರು, ವಿದ್ಯಾರ್ಥಿಗಳು ಕೇಂದ್ರ ವಾರ್ತಾ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!