Uncategorized

ಹರಿಯಾಣ ಗಡಿಯಲ್ಲಿ ಪೊಲೀಸರು- ಕೈ ಕಾರ್ಯಕರ್ತರ ನಡುವೆ ತಳ್ಳಾಟ

ಚಂಡೀಗಢ, ಅ 6- ಸಂಸತ್ತು ಅಂಗೀಕರಿಸಿದ ಕೃಷಿ ತಿದ್ದುಪಡಿ ಮಸೂದೆ ವಿರೋಧಿಸಿ ಕಾಂಗ್ರೆಸ್ ನಿಂದ ದೇಶವ್ಯಾಪಿ ಪ್ರತಿಭಟನೆ ನಡೆಯುತ್ತಿದ್ದು , ಪಂಜಾಬ್ ಸರ್ಕಾರದ ಜೊತೆಯಾಗಿ ಖೇತಿ ಬಚಾವೋ ಎಂಬ ಹೆಸರಿನಲ್ಲಿ ರಾಹುಲ್ ಗಾಂಧಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇಂದು ರಾಹುಲ್ ಗಾಂಧಿ ಅವರನ್ನು ಹರಿಯಾಣ ಗಡಿ ಪ್ರವೇಶಿಸದಂತೆ ತಡೆಯಲಾಗಿದೆ. ಈ ಹಿನ್ನೆಲೆ ಸ್ಥಳದಲ್ಲಿ ಪೊಲೀಸರು ಹಾಗೂ ಕೈ ಕಾರ್ಯಕರ್ತರ ನಡುವೆ ತಳ್ಳಾಟ ಏರ್ಪಟ್ಟಿದೆ. ಜೊತೆಗೆ ಸ್ಥಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಭಾರೀ ಘೋಷಣೆ ಕೇಳಿಬಂದಿದೆ.

ಈ ಹಿನ್ನೆಲೆ ಟ್ವೀಟ್ ಮಾಡಿರುವ ರಾಹುಲ್ ನಾನು ಇಲ್ಲಿಂದ ಕದಲುವುದಿಲ್ಲ , ನಾನು ಇಲ್ಲಿ ಸಂತೋಷದಿಂದ ಕಾಯುತ್ತೇನೆ, 1 ಗಂಟೆ, 5 ಗಂಟೆ, 24 ಗಂಟೆ, 100 ಗಂಟೆ, 1000 ಗಂಟೆ 5000 ಗಂಟೆ ಎಂದು ನಂತರ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!