Hathras

ಹತ್ರಾಸ್ ಘಟನೆ ಪಿತೂರಿಯಲ್ಲ, ದುರಂತ : ರಾಹುಲ್ ಗಾಂಧಿ

ಪಟಿಯಾಲ, 06- ಉತ್ತರ ಪ್ರದೇಶದ ಹತ್ರಾಸ್ ಘಟನೆಯಲ್ಲಿ “ಅಂತಾರಾಷ್ಟ್ರೀಯ ಪಿತೂರಿ” ಇದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರಾದರೂ, ವೈಯಕ್ತಿಕವಾಗಿ ಇದೊಂದು ದುರಂತ ಎಂದು ಪರಿಗಣಿಸುವುದಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿಳಿಸಿದ್ದಾರೆ.

“ಆದಿತ್ಯನಾಥ ಅವರ ಅಭಿಪ್ರಾಯಕ್ಕೆ ಅರ್ಹರಾಗಿದ್ದಾರೆ, ಅವರು ಏನು ಬಯಸುತ್ತಾರೆಂದು ಅವರು ಊಹಿಸಬಲ್ಲರು, ಆದರೆ ಸುಂದರ ಯುವತಿ ಕ್ರೂರವಾಗಿ ಹತ್ಯೆಯಾಗಿದ್ದಾರೆ. ಅವರ ಕುಟುಂಬ ಬೆದರಿಕೆಗೆ ಒಳಗಾಗಿದೆ” ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಈ ಘಟನೆಯ ಬಗ್ಗೆ ಒಂದು ಮಾತನ್ನೂ ಹೇಳಿಲ್ಲ ಎಂದು ಟೀಕಿಸಿರುವ ರಾಹುಲ್, ಹತ್ರಾಸ್ ಘಟನೆಯ ಬಗ್ಗೆ ರಾಜ್ಯದಲ್ಲಿ ಜಾತಿ ಸಂಘರ್ಷವನ್ನು ಹುಟ್ಟುಹಾಕಲು “ಅಂತರಾಷ್ಟ್ರೀಯ ಪಿತೂರಿ” ಎಂದು ಸರ್ಕಾರ ಬಿಂಬಿಸುತ್ತಿದೆ. ವದಂತಿಗಳನ್ನು ಹರಡಲು ಮತ್ತು ವಾತಾವರಣವನ್ನು ಕೆರಳಿಸಲು 19 ಎಫ್ಐಆರ್ ಗಳನ್ನು ದಾಖಲಿಸಿದ್ದಾರೆ ಎಂದಿದ್ದಾರೆ.

ಹತ್ರಾಸ್ ನತ್ತ ತೆರಳುತ್ತಿದ್ದ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ತಮ್ಮನ್ನು ಮತ್ತು ಪಕ್ಷದ ಕಾರ್ಯಕರ್ತರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಆದರೆ ಹತ್ರಾಸ್ ಸಂತ್ರಸ್ತೆಯ ಕುಟುಂಬಕ್ಕೆ ನೀಡಿರುವ ಕಿರುಕುಳ, ಬೆದರಿಕೆಗೆ ಹೋಲಿಸಿದರೆ ಇದು ಅತ್ಯಲ್ಪ ಎಂದು ತಿಳಿಸಿದ್ದಾರೆ.

“ದೇಶದ ಜನರನ್ನು ರಕ್ಷಿಸುವುದು ನಮ್ಮ ಕರ್ತವ್ಯ. ನಿಮ್ಮ ಮನೆ ಮಗ ಅಥವಾ ಮಗಳು ಈ ರೀತಿ ಕ್ರೂರವಾಗಿ ಹತ್ಯೆಗೀಡಾದರೆ ಪ್ರತಿಭಟಿಸುವುದಿಲ್ಲವೇ? ಹಾಗೆಯೇ ನಾವೂ ಸಹ ಹತ್ರಾಸ ಘಟನೆಯನ್ನು ಖಂಡಿಸಿ ಪ್ರತಿಭಟಿಸಿದ್ದೇವೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!