New DelhiHathrasLucknow

ಹಾಥರಸ್ ಅತ್ಯಾಚಾರ, ಹತ್ಯೆ ಪ್ರಕರಣ ಅಘಾತಕಾರಿ, ಭಯಾನಕ -ಸುಪ್ರೀಂ ಕೋರ್ಟ್

ನವದೆಹಲಿ, ಅ 6(ಯುಎನ್ಐ) ಹಾಥರಸ್ ಸಾಮೂಹಿಕ ಅತ್ಯಚಾರ, ಹತ್ಯೆ ಪ್ರಕರಣದ ಸಾಕ್ಷಿಗಳ ರಕ್ಷಣೆಗೆ ಸ್ಥಳೀಯ ಮಟ್ಟದಲ್ಲಿ ಕಲ್ಪಿಸಲಾಗಿರುವ ಸುರಕ್ಷತಾ ಕ್ರಮ ಬಗ್ಗೆ ಪ್ರಮಾಣ ಪತ್ರ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಹಾಥರಸ್ ಅತ್ಯಾಚಾರ, ಹತ್ಯೆ ಪ್ರಕರಣವನ್ನು ಅಘಾತಕಾರಿ ಹಾಗೂ ಭಯಾನಕ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ನ್ಯಾಯಪೀಠ ಹೇಳಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹರಡಿರುವಂತೆ ಹೆಚ್ಚಿನ ಪ್ರಮಾಣದ ಪರಿಹಾರ ಪಡೆದುಕೊಳ್ಳವಂತೆ ಬಾಧಿತೆ ಸಂಬಂಧಿಯೊಬ್ಬರನ್ನು ಟಿವಿ ಪತ್ರಕರ್ತರೊಬ್ಬರು ಪ್ರಚೋದಿಸಿರುವ ವಿಷಯವನ್ನು ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಹಾಗೂ ಉತ್ತರ ಪ್ರದೇಶ ಸರ್ಕಾರದ ಪರ ಹಾಜರಾಗಿದ್ದ ಹಿರಿಯ ವಕೀಲರು ಸುಪ್ರೀಂ ಕೋರ್ಟ್ ಗೆ ತಿಳಿಸಿದರು. ಘಟನೆಯ ಬಗ್ಗೆ ಪಟ್ಟ ಭದ್ರ ಹಿತಾಸಕ್ತಿಗಳು ಸುಳ್ಳು ಹಾಗೂ ವಿಷಪೂರಿತ ವದಂತಿಗಳನ್ನು ಹಬ್ಬಿಸುತ್ತಿವೆ. ಹಾಗಾಗಿ ಉತ್ತರ ಪ್ರದೇಶ ಸರ್ಕಾರ ಈ ಘಟನೆಯನ್ನು ಸಿಬಿಐ ತನಿಖೆಗೆ ವರ್ಗಾಯಿಸಿದೆ ಎಂದು ಸಾಲಿಸಿಟರ್ ಜನರಲ್ ಹೇಳಿದರು.

ಈ ಹಂತದಲ್ಲಿ ಮುಖ್ಯನ್ಯಾಯಮೂರ್ತಿ ಪ್ರತಿಕ್ರಿಯಿಸಿ, ” ಘಟನೆ ಆಘಾತಕಾರಿ ಹಾಗೂ ಅಸಾಧಾರಣವಾಗಿರುವ ಕಾರಣ ನಾವು ಅರ್ಜಿದಾರರ ವಿಚಾರಣೆ ನಡೆಸುತ್ತಿದ್ದೇವೆ. ನಿಮ್ಮ ನೆರವನ್ನು ನಾವು ಶ್ಲಾಘಿಸುತ್ತೇವೆ, ಆದರೆ ನಿಮಗೆ ಈಗ ಮಾನ್ಯತೆ ಇಲ್ಲ ಮೊದಲು ಆರ್ಜಿದಾರರ ವಿಚಾರಣೆ ನಡೆಸೋಣ ಎಂದರು, ಘಟನೆಗೆ ಸಂಬಂಧಿಸಿದಂತೆ, ಬಾಧಿತರನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸುವ ವಕೀಲರು ಸೇರಿದಂತೆ ತಳಮಟ್ಟದಲ್ಲಿ ಸಾಕ್ಷಿಗಳ ರಕ್ಷಣೆಗೆ ಕೈಗೊಂಡಿರುವ ಕ್ರಮಗಳನ್ನು ಒಳಗೊಂಡ ವಿವರವಾದ ಪ್ರಮಾಣ ಪತ್ರ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ರಾಜ್ಯ ಸರ್ಕಾರಕ್ಕೆ ಸೂಚಿಸಿ, ಪ್ರಕರಣದ ವಿಚಾರಣೆಯನ್ನು ಮುಂದಿನ ವಾರ ಕೈಗೆತ್ತಿಕೊಳ್ಳುವುದಾಗಿ ಹೇಳಿ ಮುಂದೂಡಿತು.

ಹಾಥರಾಸ್ ಘಟನೆ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಎಸ್. ದುಬೆ ಎಂಬುವರು ಸಲ್ಲಿಸಿದ್ದ ಆರ್ಜಿಯ ವಿಚಾರಣೆ ನಡೆಸಿ ನ್ಯಾಯಪೀಠ ಈ ಆದೇಶ ನೀಡಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!