Sports

ಕಾರ್ತಿಕ ನಾಯಕತ್ವಕ್ಕೆ ಕಠಿಣ ಪರೀಕ್ಷೆ

ಅಬುಧಾಬಿ, ಅ.6 – ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವಲ್ಲಿ ಸೊರಗಿರುವ ಕೋಲ್ಕೊತಾ ನೈಟ್ ರೈಡರ್ಸ್ ತಂಡದ ದಿನೇಶ ಕಾರ್ತಿಕ ಐಪಿಎಲ್ 13ನೇ ಆವೃತ್ತಿಯ 21ನೇ ಪಂದ್ಯದಲ್ಲಿ ಬುಧವಾರ ಲಯಕ್ಕೆ ಮರಳಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಠಿಣ ಪರೀಕ್ಷೆ ಎದುರಿಸಬೇಕಾಗಿದೆ.

ಕಾರ್ತಿಕ್ ನಾಯಕತ್ವದಲ್ಲಿ ಕೆಕೆಆರ್ ಅಸ್ಥಿರ ಪ್ರದರ್ಶನ ನೀಡುತ್ತಿರುವ ಕಾರಣ ಇಂಗ್ಲೆಂಡ್ ತಂಡದ ಇಯಾನ್ ಮಾರ್ಗನ್ ಗೆ ನಾಯಕತ್ವ ವಹಿಸುವ ಚಿಂತನೆಯಲ್ಲಿದ್ದರೂ ತಂಡದ ಮ್ಯಾನೇಜ್ಮೆಂಟ್ ಕಾರ್ತಿಕ್ ಮೇಲೆ ವಿಶ್ವಾಸ ಹೊಂದಿದೆ. ಆದರೆ ಕಳೆದ ನಾಲ್ಕು ಪಂದ್ಯಗಳಲ್ಲಿ ಕೇವಲ 37 ರನ್ ಗಳಿಸಿರುವ ಕಾರ್ತಿಕ್ ತಂಡದ ವಿಶ್ವಾಸವನ್ನು ಉಳಿಸಿಕೊಳ್ಳುವ ಸಂದಿಗ್ದತೆಗೆ ಸಿಲುಕಿದ್ದಾರೆ. ಹೀಗಾಗಿ ಬುಧವಾರದ ಪಂದ್ಯ ಕಾರ್ತಿಕ ನಾಯಕತ್ವಕ್ಕೆ ಮಹತ್ವದ್ದಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿತೇಶ್ ರಾಣಾ ಮತ್ತು ಮಾರ್ಗನ್ ಮಿಂಚಿದರಾದರೂ ನಾಯಕ ಸೇರಿದಂತೆ ಇತರರಿಂದ ಸೂಕ್ತ ಆಟ ಹೊರಹೊಮ್ಮದ ಕಾರಣ ಹ್ಯಾಟ್ರಿಕ ಜಯದ ಅವಕಾಶವನ್ನು ಕೆಕೆಆರ್ ಕಳೆದುಕೊಂಡಿದೆ. ಆದರೆ ಚೆನ್ನೈ ವಿರುದ್ಧ ಪುಟಿದೇಳುವ ವಿಶ್ವಾಸದಲ್ಲಿ ಕೋಲ್ಕೊತಾ ಇದೆ.

ಅತ್ತ ಹ್ಯಾಟ್ರಿಕ್ ಸೋಲಿನ ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ ವಿರುದ್ಧ ಹತ್ತು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ ಕೊನೆಗೂ ಲಯ ಕಂಡುಕೊಂಡಿರುವ ಧೋನಿ ಬಳಗ ಕೋಲ್ಕೊತಾ ವಿರುದ್ಧವು ಇದೇ ಲಯ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ. ತಲಾ ಅರ್ಧಶತಕ ಸಿಡಿಸಿದ ಆರಂಭಿಕರಾದ ಶೇನ್ ವ್ಯಾಟ್ಸನ್ ಮತ್ತು ಫಾಫ್ ಡು ಪ್ಲೆಸಿಸ್ ಯಾರೂ ಉಹಿಸಿದ ರೀತಿಯಲ್ಲಿ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟಿದ್ದಾರೆ. ಹೀಗಾಗಿ ತಂಡ ಆಟಗಾರರಲ್ಲಿ ಆತ್ಮಸ್ಥೈರ್ಯ ಇಮ್ಮಡಿಗೊಂಡಿದ್ದು, ಮತ್ತೊಂದು ಗೆಲುವಿನ ಹುಮ್ಮಸ್ಸಿನಲ್ಲಿ ಧೋನಿ ಬಳಗವಿದೆ.

ಕೋಲ್ಕೊತಾ
ದಿನೇಶ್ ಕಾರ್ತಿಕ್ (ನಾಯಕ), ರಾಹುಲ್ ತ್ರಿಪಾಠಿ, ಶುಬ್ಮನ್ ಗಿಲ್, ಇಯಾನ್ ಮಾರ್ಗನ್, ನಿತೇಶ್ ರಾಣಾ, ಆ್ಯಂಡ್ರೆ ರಸೆಲ್, ಸುನಿಲ್ ನರೇನ್, ಕಮ್ಲೇಶ್ ನಾಗರಕೋಟಿ, ಕುಲ್ದೀಪ್ ಯಾದವ್, ಪ್ಯಾಟ್ ಕಮಿನ್ಸ್, ಶಿವಂ ದುಬೆ
ಚೆನ್ನೈ
ಮಹೇಂದ್ರ ಸಿಂಗ್ ಧೋನಿ (ನಾಯಕ), ಫಾಫ್ ಡು ಪ್ಲೆಸಿಸ್, ಶೇನ್ ವ್ಯಾಟ್ಸನ್, ಅಂಬಾಟಿ ರಾಯುಡು, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್, ಡ್ವೇನ್ ಬ್ರಾವೊ, ಶಾರ್ದುಲ್ ಠಾಕೂರ್, ಪಿಯೂಶ್ ಚಾವ್ಲಾ, ದೀಪಕ್ ಚಾಹರ್.
ಪಂದ್ಯ ಆರಂಭ: ರಾತ್ರಿ 7.70ಕ್ಕೆ
ಸ್ಥಳ: ಶೇಖ್ ಝಾಯೆದ್ ಕ್ರೀಡಾಂಗಣ, ಅಬುಧಾಬಿ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್.
2020ರ ಐಪಿಎಲ್ ನಲ್ಲಿ ಇತ್ತಂಡಗಳ ಗೆಲುವು-ಸೋಲು

Related Articles

Leave a Reply

Your email address will not be published. Required fields are marked *

Back to top button
error: Content is protected !!