New Delhi

ಕಲ್ಲಿದ್ದಲು ಹಗರಣ.. ಮಾಜಿ ಕೇಂದ್ರ ಸಚಿವ ತಪ್ಪಿತಸ್ಥ

ನವದೆಹಲಿ, ಅ 6- ಕಲ್ಲಿದ್ದಲು ಹಗರಣದಲ್ಲಿ ಮಾಜಿ ಕೇಂದ್ರ ಸಚಿವ ದಿಲೀಪ್ ರಾಯ್ ತಪ್ಪಿತಸ್ಥ ಎಂದು ದೆಹಲಿ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

1999ರಲ್ಲಿ ಜಾರ್ಖಂಡ್ ನಲ್ಲಿ ಕಲ್ಲಿದ್ದಲು ಗಣಿಗಳ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಸಂಬಂಧ ಪ್ರಕರಣ ದಾಖಲಾಗಿತ್ತು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಕೇಂದ್ರ ಗಣಿ ಖಾತೆ ಸಹಾಯಕ ಸಚಿವರಾಗಿದ್ದ ದಿಲೀಪ್ ರಾಯ್ .. ಅಪರಾಧಿಕ ಸಂಚು ನಡೆಸಿದ್ದರು ಎಂಬುದು ಸಾಬೀತಾಗಿದೆ ಎಂದು ವಿಶೇಷ ನ್ಯಾಯಾಧೀಶ ಭರತ್ ಪರಾಶರ್ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.

ಕಲ್ಲಿದ್ದಲು ಸಚಿವಾಲಯದಲ್ಲಿ ಕಾರ್ಯನಿರ್ವಹಿಸಿದ್ದ ಹಿರಿಯ ಅಧಿಕಾರಿಗಳನ್ನು ಸಹ ನ್ಯಾಯಾಲಯ ದೋಷಿ ಎಂದು ಹೇಳಿದೆ. ಪ್ರದೀಪ್ ಕುಮಾರ್ ಬ್ಯಾನರ್ಜಿ, ನಿತ್ಯಾನಂದ್ ಗೌತಮ್, ಮಹೇಂದ್ರ ಕುಮಾರ್ ಅಗರವಾಲ್ ಅವರು ತಪ್ಪು ಎಸಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಅಕ್ಟೋಬರ್ 14 ರಂದು ಈ ಪ್ರಕರಣದಲ್ಲಿ ನ್ಯಾಯಾಲಯ ಶಿಕ್ಷೆ ನಿಗಧಿಪಡಿಸಲಿದೆ. 1999ರಲ್ಲಿ ಜಾರ್ಖಂಡ್ ಗಿರಿಧಿಯಲ್ಲಿರುವ ಬ್ರಹ್ಮಾ ದೀಪ ಕಲ್ಲಿದ್ದಲು ಗಣಿಗಳನ್ನು ಕಾಸ್ಟ್ರಾನ್ ಟೆಕ್ನಾಲಜೀಸ್ ಲಿಮಿಟೆಡ್ ಗೆ ಹಂಚಿಕೆ ಮಾಡಲಾಗಿತ್ತು. ಈ ಹಂಚಿಕೆಯಲ್ಲಿ ಮಾಜಿ ಸಚಿವ ದಿಲೀಪ್ ರಾಯ್ ಅವ್ಯವಹಾರ ನಡಸಿದ್ದರು ಎಂಬ ಆರೋಪಗಳು ಎದುರಾಗಿದ್ದವು.

Related Articles

Leave a Reply

Your email address will not be published. Required fields are marked *

Back to top button
error: Content is protected !!