HathrasLucknow

ಹತ್ರಾಸ್ ಘಟನೆ: ನ್ಯಾಯ ಕೇಳಿದವರ ಮೇಲೆ ದೇಶದ್ರೋಹ, ಕ್ರಿಮಿನಲ್ ಪ್ರಕರಣ

ಲಖನೌ, ಅ.6- ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಉತ್ತರ ಪ್ರದೇಶದ ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದ ಭೀಮ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಆಜಾದ, ವರದಿ ಮಾಡಿದ ಪತ್ರಕರ್ತರು, ಪ್ರತಿಭಟಿಸಿದ ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ.

ಸಂತ್ರಸ್ಥೆಗೆ ನ್ಯಾಯ ಒದಗಿಸಬೇಕೆಂದು ಬೇಡಿಕೆ ಇಟ್ಟವರ ಮೇಲೆಯೇ ಪ್ರಕರಣಗಳನ್ನು ದಾಖಲಿಸಲಾಗಿರುವುದು ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜರುಗಿರುವುದು ದುದೈ೯ವ ಎಂದು ಅಭಿಪ್ರಾಯ ಕೇಳಿ ಬರುತ್ತಿದೆ.

ಕೆಲವರ ವಿರುದ್ಧ ದೇಶದ್ರೋಹ, ಕ್ರಿಮಿನಲ್ ಸಂಚು ಪ್ರಕರಣ ದಾಖಲಾದರೆ ಇನ್ನು ಕೆಲವರ ವಿರುದ್ಧ 144 ಸೆಕ್ಷನ್ ಉಲ್ಲಂಘನೆ ಮತ್ತಿತರ ಆರೋಪಗಳಲ್ಲಿ ಅಲ್ಲಿನ ಸರ್ಕಾರ ಎಫ್ ಐಆರ್ ದಾಖಲಿಸಿದೆ.

ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಪತ್ರಕರ್ತ, ಓರ್ವ ರಾಜಕಾರಣಿ ಸೇರಿದಂತೆ ಹಲವು ಅಪರಿಚಿತರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದೇಶದ್ರೋಹ, ಕ್ರಿಮಿನಲ್ ಸಂಚು, ಗಲಭೆಗೆ ಪಿತೂರಿ ಸೇರಿದಂತೆ ವಿವಿಧ ಸೆಕ್ಷನ್ ಗಳಡಿ ಎಫ್ ಐಆರ್ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಾಂದ ಪಾ ಪೊಲೀಸ್ ಠಾಣೆಯಲ್ಲಿ ಭಾನುವಾರ ಎಫ್ ಐಆರ್ ದಾಖಲಾಗಿದೆ. ಹತ್ರಾಸ್ ನಲ್ಲಿ ಮೂರು ಎಫ್ ಐಆರ್ ದಾಖಲಾಗಿದ್ದು, ಒಟ್ಟು 680 ಜನರನ್ನು ಅದರಲ್ಲಿ ಹೆಸರಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕೆ ವಿವಿಧ ಠಾಣೆಯಗಳಲ್ಲಿ ಪ್ರತ್ಯೇಕ ಎಫ್ ಐಆರ್ ದಾಖಲಾಗಿದೆ.

ಮೇಲ್ಜಾತಿಯ ಠಾಕೂರ ಸಮುದಾಯದ ನಾಲ್ವರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ 19 ವರ್ಷದ ದಲಿತ ಯುವತಿ ಘಟನೆ ನಡೆದ 15 ದಿನಗಳ ನಂತರ ಸೆಪ್ಟೆಂಬರ್ 29ರಂದು ದೆಹಲಿಯಲ್ಲಿ ಸಾವನ್ನಪ್ಪಿದ್ದರು. ಅತ್ಯಾಚಾರ ಮಾಡಿ ಆಕೆಯ ನಾಲಿಗೆ ತುಂಡರಿಸಲಾಗಿತ್ತು ಮತ್ತು ಆಕೆಯ ಬೆನ್ನು ಮೂಳೆ ಮುರಿಯಲಾಗಿತ್ತು. ಆದರೆ ಆಕೆಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡಲು ಸಕಾ೯ರ ವಿಫಲವಾಗಿತ್ತು. ಸ್ಥಳೀಯ ಸಕಾ೯ರಿ ಆಸ್ಪತ್ರೆಯ ಜನರಲ್ ವಾಡ೯ನಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗಿತ್ತು. ನಂತರ ಆಕೆಯ ಶವವನ್ನು ಕುಟುಂಬದವರಿಗೆ ತೋರಿಸದೇ ಮಧ್ಯ ರಾತ್ರಿ ಪೋಲೀಸರು ಸುಟ್ಟು ಹಾಕಿದ್ದರು.

ಸಂತ್ರಸ್ತೆಯ ಮನೆ ಮತ್ತು ಗ್ರಾಮಕ್ಕೆ ಪತ್ರಕತ೯ರು ಬರಬಾರದು ಎಂಬ ಉದ್ದೇಶದಿಂದ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button
error: Content is protected !!