Bengaluru

ರಾಜ್ಯದಲ್ಲಿ 7051 ಹೊಸ ಕೋವಿಡ್‌ ಪ್ರಕರಣ ಪತ್ತೆ, 84 ಸಾವು

 

ಬೆಂಗಳೂರು, ಅ 5- ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಕೊಂಚ ಇಳಿಮುಖವಾಗಿದ್ದು, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಒಟ್ಟು 7051 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, 84 ಮಂದಿ ಮೃತಪಟ್ಟಿದ್ದಾರೆ.

ಈ ನಡುವೆ, ಕಳೆದ 24 ಗಂಟೆಗಳಲ್ಲಿ 7064 ಮಂದಿ ಗುಣಮುಖರಾಗಿದ್ದು, ಇಲ್ಲಿಯವರೆಗೆ ಒಟ್ಟು 5.22 ಲಕ್ಷ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಸದ್ಯ ರಾಜ್ಯದಲ್ಲಿ 1.15 ಲಕ್ಷ ಸಕ್ರಿಯ ಪ್ರಕರಣಗಳಿದ್ದು, 9389 ಮಂದಿ ಮೃತಪಟ್ಟಿದ್ದಾರೆ. 841 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ ಕೂಡ ಕಳೆದ 24 ಗಂಟೆಗಳಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಸೋಮವಾರ 2189 ಸೋಂಕಿತರು ಕಂಡುಬಂದಿದ್ದು, 34 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 2.52 ಲಕ್ಷಕ್ಕೇರಿಕೆಯಾಗಿದೆ.
ಬಾಗಲಕೋಟೆಯಲ್ಲಿ 159, ಬಳ್ಳಾರಿಯಲ್ಲಿ 170, ಬೆಳಗಾವಿಯಲ್ಲಿ 142, ಬೆಂಗಳೂರು ಗ್ರಾಮಾಂತರದಲ್ಲಿ 141, ಬೀದರ್‌ನಲ್ಲಿ 23, ಚಾಮರಾಜನಗರದಲ್ಲಿ 66, ಚಿಕ್ಕಬಳ್ಳಾಪುರದಲ್ಲಿ 92, ದಕ್ಷಿಣ ಕನ್ನಡದಲ್ಲಿ 245, ಗದಗದಲ್ಲಿ 51, ಕಲಬುರಗಿಯಲ್ಲಿ 127, ಕೊಡಗಿನಲ್ಲಿ 47, ಕೋಲಾರದಲ್ಲಿ 147, ಕೊಪ್ಪಳದಲ್ಲಿ 36, ರಾಯಚೂರಿನಲ್ಲಿ 121, ರಾಮನಗರದಲ್ಲಿ 89, ವಿಜಯಪುರದಲ್ಲಿ 136, ಯಾದಗಿರಿಯಲ್ಲಿ 46 ಪ್ರಕರಣಗಳು ವರದಿಯಾಗಿವೆ.

ಚಿಕ್ಕಮಗಳೂರಿನಲ್ಲಿ 66, ಚಿತ್ರದುರ್ಗದಲ್ಲಿ 276, ದಕ್ಷಿಣ ಕನ್ನಡದಲ್ಲಿ 245, ದಾವಣಗೆರೆಯಲ್ಲಿ 178, ಧಾರವಾಡದಲ್ಲಿ 1780, ಹಾಸನದಲ್ಲಿ 537, ಹಾವೇರಿಯಲ್ಲಿ 537, ಮಂಡ್ಯದಲ್ಲಿ 227, ಮೈಸೂರಿನಲ್ಲಿ 910, ಶಿವಮೊಗ್ಗದಲ್ಲಿ 294, ತುಮಕೂರಿನಲ್ಲಿ 294, ಉಡುಪಿಯಲ್ಲಿ 118, ಉತ್ತರಕನ್ನಡದಲ್ಲಿ 64 ಪ್ರಕರಣಗಳು ವರದಿಯಾಗಿವೆ ಎಂದು ಆರೊಗ್ಯ ಇಲಾಖೆ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!