Sports

ಮಿಶ್ರಾಗೆ ಗಾಯ; ಮುಂದಿನ ಪಂದ್ಯಗಳಿಗೆ ಅಲಭ್ಯ

ನವದೆಹಲಿ, ಅ.5- ಡೆಲ್ಲಿ ಕ್ಯಾಪಿಟಲ್ಸ್ ಹಿರಿಯ ಸ್ಪಿನ್ನರ್ ಅಮಿತ್ ಮಿಶ್ರಾ ಬೆರಳಿನ ಗಾಯದಿಂದ ಬಳಲುತ್ತಿದ್ದು, ಐಪಿಎಲ್ 2020 ರ ಉಳಿದ ಪಂದ್ಯದಿಂದ ಹೊರಗುಳಿದಿದ್ದಾರೆ. ಅಕ್ಟೋಬರ್ 3 ರಂದು ಕೆಕೆಆರ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ವೇಳೆ ಪೆಟ್ಟು ಬಿದ್ದಿದ್ದು, ಬೌಲಿಂಗ್ ಮಾಡುವ ಕೈಯ ಉಂಗುರದ ಬೆರಳಿಗೆ ಫ್ಲೆಕ್ಟರ್ ಆಗಿದೆ. ಮಿಶ್ರಾ ಈ ಋತುವಿನಲ್ಲಿ ಮೂರು ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು, ಮೂರು ವಿಕೆಟ್ ಪಡೆದಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ನಿತೀಶ್ ರಾಣಾ ಅವರ ಬಾರಿಸಿದ ಚೆಂಡನ್ನು ರಿಟರ್ನ್ ಕ್ಯಾಚ್ ತೆಗೆದುಕೊಳ್ಳಲು ಪ್ರಯತ್ನಿಸುವಾಗ ಮಿಶ್ರಾ ಗಾಯಗೊಂಡರು. ಮಿಶ್ರಾ ಅಡ್ಡಲಾಗಿ ಬಿದ್ದ ಪರಿಣಾ ಚೆಂಡಿನ ಕೆಳಗೆ ಕೈ ಹೋಯಿತು. ಆದರೆ ಹಿಡಿಯಲು ಸಾಧ್ಯವಾಗಲಿಲ್ಲ. ಈ ವೇಳೆ ಮಿಶ್ರಾ ಗಾಯಕ್ಕೆ ತುತ್ತಾದರು. ಅವರು ಮತ್ತೊಂದು ಓವರ್ ಎಸೆದು, ಶುಭ್ ಮನ್ ಗಿಲ್ ಅವರನ್ನು ಸಹ ಔಟ್ ಮಾಡಿದರು. ಆದರೆ ಅದರ ನಂತರ ಮತ್ತೆ ಬೌಲಿಂಗ್ ಮಾಡಲಿಲ್ಲ. ಇವರು 2 ಓವರ್‌ಗಳಲ್ಲಿ 14 ರನ್ ನೀಡಿ 1 ವಿಕೆಟ್‌ಗಳನ್ನು ಗಳಿಸಿದರು.

ತಂಡ ಮತ್ತೊಬ್ಬ ಲೆಗ್-ಸ್ಪಿನ್ನಿಂಗ್ ಆಯ್ಕೆಯನ್ನು ಹೊಂದಿದೆ. ಸಂದೀಪ್ ಲ್ಯಾಮಿಚೇನ್ನಲ್ಲಿ ತಮ್ಮ ಬೌಲಿಂಗ್ ನಡೆಸಲು ಕಾತುರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!