Sports

ಫ್ರೆಂಚ್ ಓಪನ್: ಪೆಟ್ರಾ ಕ್ವಿಟೋವಾ ಕ್ವಾರ್ಟರ್ಸ್ ಗೆ

ಪ್ಯಾರೀಸ್, ಅ.5- ಜೆಕ್ ಗಣರಾಜ್ಯದ ಸ್ಟಾರ್ ಆಟಗಾರ್ತಿ ಪೆಟ್ರಾ ಕ್ವಿಟೋವಾ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲ್ಯಾಮ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ.

ಸೋಮವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಕ್ವಿಟೋವಾ 6-2, 6-4 ರಿಂದ ಚೀನಾದ ಜಾಂಗ್ ಶೂಯಿ ವಿರುದ್ಧ ಒಂದು ಗಂಟೆ 25 ನಿಮಿಷಗಳ ಕಾದಾಟದಲ್ಲಿ ಜಯ ಸಾಧಿಸಿದ್ದಾರೆ. ಪೆಟ್ರಾ ಅವರು ಎರಡನೇ ಬಾರಿಗೆ ಟೂರ್ನಿಯ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ. ಅಲ್ಲದೆ ಗ್ರ್ಯಾನ್ ಸ್ಲ್ಯಾಮ್ ಟೆನಿಸ್ ಟೂರ್ನಿಯಲ್ಲಿ 12ನೇ ಬಾರಿಗೆ ಎಂಟರ ಘಟ್ಟ ಪ್ರವೇಶಿಸಿದ್ದಾರೆ. ಏಕಪಕ್ಷೀಯ ಪಂದ್ಯದಲ್ಲಿ ಕ್ವಿಟೋವಾ ಮನಮೋಹಕ ಆಟದ ಪ್ರದರ್ಶನ ನೀಡಿ ಜಯ ಸಾಧಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!