New Delhi

ಸಾಲ ಬಡ್ಡಿ ಮನ್ನಾ; ಕೇಂದ್ರದ ಉತ್ತರಕ್ಕೆ ಸುಪ್ರೀಮ ಕೋರ್ಟ್ ಅಸಮಾಧಾನ

ನವದೆಹಲಿ, ಅ 5- ಸಾಲದ ಬಡ್ಡಿ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪ್ರತಿಕ್ರಿಯೆಯಿಂದ ತೃಪ್ತಿಗೊಳ್ಳದ ಸುಪ್ರೀಂ ಕೋರ್ಟ್, ಈ ಸಂಬಂಧ ವಿಸ್ತೃತ ಪ್ರಮಾಣಪತ್ರ ಸಲ್ಲಿಸುವಂತೆ ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್‌ ಮತ್ತು ಇತರ ಪ್ರತಿವಾದಿಗಳಿಗೆ ಸೂಚಿಸಿದೆ.

ಕೋವಿಡ್‌-19 ಸೋಂಕು ಹರಡುವಿಕೆ ತಡೆಯಲು ಮಾ.27ರಿಂದ ದೇಶಾದ್ಯಂತ ಲಾಕ್‌ಡೌನ್‌ ಘೋಷಣೆಯಾಗಿತ್ತು. ಆಗ ಆರ್‌ಬಿಐ ಮೂರು ತಿಂಗಳ ಅವಧಿಗೆ ಎಲ್ಲಾ ಕಂತುಗಳ ಪಾವತಿಯನ್ನು ಮನ್ನಾ ಮಾಡಿತ್ತು. ಆ ಮೊತ್ತವನ್ನು ಮುಂದುವರಿದ ತಿಂಗಳಲ್ಲಿ ಪಡೆಯಲು ಅನುವು ಮಾಡಿಕೊಟ್ಟಿತ್ತು. ನಂತರ, ಈ ಯೋಜನೆಯನ್ನು ಆ.31ರವರೆಗೆ ವಿಸ್ತರಿಸಿತ್ತು.

ಈ ಅವಧಿಯಲ್ಲಿ ಸಾಲಗಳಿಗೆ ಯಾವುದೇ ಬಡ್ಡಿಯನ್ನು ಹೇರಬಾರದು ಎಂದು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಆಗ್ರಾ ನಿವಾಸಿ ಗಜೇಂದ್ರ ಶರ್ಮಾ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಸರ್ಕಾರ ಈ ಯೋಜನೆಯನ್ನು ಎರಡು ವರ್ಷಗಳ ಕಾಲ ವಿಸ್ತರಿಬಹುದು ಎಂದು ತಿಳಿಸಿತ್ತು. ಆದರೆ, ಈ ಕುರಿತು ಸ್ಪಷ್ಟತೆ ತಿಳಿಯದ್ದರಿಂದ ನ್ಯಾಯಮೂರ್ತಿ ಅಶೋಕ‌ ಭೂಷಣ‌ ನೇತೃತ್ವದ ನ್ಯಾಯಪೀಠ, ಸ್ಪಷ್ಟ ನಿಲುವು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!