Hyderabad

ಭೂಮಿಗೆ ತೀರಾ ಸಮೀಪವಾಗಲಿರುವ ಮಂಗಳ ಗ್ರಹ

ಹೈದರಾಬಾದ್, ಅ 15- ಸೌರವ್ಯೂಹದ ಮಂಗಳ ಗ್ರಹ ಭೂಮಿಗೆ ಮಂಗಳವಾರ ಅತಿ ಹತ್ತಿರವಾಗಿರಲಿದೆಯಂತೆ.

ಸೂರ್ಯನ ವಿರುದ್ಧ ಸುತ್ತುತ್ತಿರುವ ಮಂಗಳ ಗ್ರಹ ಮಂಗಳವಾರ ಬೆಳಗ್ಗೆ 7.47 ಗಂಟೆಗೆ ಭೂಮಿಗೆ 6,20,83,116 ಕಿಮೀ (62.02 ಮಿಲಿಯನ್‌ ಕಿಮೀ) ಹತ್ತಿರವಾಗಲಿದೆ.

ಭಾರತದ ಸೌರವ್ಯೂಹ ಸೊಸೈಟಿ (ಪಿಎಸ್‌ಐ) ನಿರ್ದೇಶಕ ಎನ್‌.ರಘುನಂದನ್‌ ಕುಮಾರ ಈ ಮಾಹಿತಿ ನೀಡಿದ್ದಾರೆ. ಈ ವಿಶೇಷ ಘಟನೆ ಪ್ರತಿ 26 ತಿಂಗಳಿಗೊಮ್ಮೆ ನಡೆಯುತ್ತದೆ ಎಂದಿದ್ದಾರೆ.

ಈ ಮಂಗಳಗ್ರಹ ನೇರವಾಗಿ ಸೂರ್ಯನಿಗೆ ಅಡ್ಡ ಬರಲಿದೆಯಂತೆ. ಈ ಸಂದರ್ಭದಲ್ಲಿ ಭೂಮಿಗೆ ಹತ್ತಿರವಾಗಿದೆ. ಟೆಲಿಸ್ಕೋಪ್‌ ಮೂಲಕ ವೀಕ್ಷಿಸಿದಲ್ಲಿ ಅದು ತುಂಬಾ ಹತ್ತಿರ, ಪ್ರಕಾಶಮಾನ ಮತ್ತು ದೊಡ್ಡದಾಗಿ ಕಾಣುತ್ತದೆ ಎಂದು ಕುಮಾರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!