Entertainment

ನಟ ವಿಶಾಲ ಆನಂದ ವಿಧಿವಶ

ನವದೆಹಲಿ, ಅ 05- ಹಿಂದಿ ಚಿತ್ರರಂಗದ ಖ್ಯಾತ ಹಿರಿಯ ನಟ ವಿಶಾಲ ಆನಂದ (81) ನಿಧನರಾಗಿದ್ದಾರೆ.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಭೀಷ್ಮ ಕೊಹ್ಲಿ ಎಂಬ ಮೂಲ ಹೆಸರಿನ ವಿಶಾಲ ಆನಂದ ಅವರು ಅಕ್ಟೋಬರ್ 4 ರಂದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

1976ರಲ್ಲಿ ತೆರೆಕಂಡಿದ್ದ ‘ಚಲ್ತೆ ಚಲ್ತೆ’ ಚಿತ್ರದ ಮೂಲಕ ಬಹಳ ದೊಡ್ಡ ಖ್ಯಾತಿ ಗಳಿಸಿಕೊಂಡಿದ್ದರು. ಈ ಚಿತ್ರದಲ್ಲಿ ಸಿಮಿ ಅಗರ್‌ವಾಲ್ ಎದುರು ನಟಿಸಿದ್ದರು. ವೃತ್ತಿ ಜೀವನದಲ್ಲಿ ಸುಮಾರು 11 ಚಿತ್ರಗಳಲ್ಲಿ ವಿಶಾಲ್ ಆನಂದ್ ಬಣ್ಣ ಹಚ್ಚಿದ್ದರು. ಕೆಲವು ಚಿತ್ರಗಳನ್ನು ನಿರ್ದೇಶನ ಸಹ ಮಾಡಿದ್ದು, ಇನ್ನು ಕೆಲವು ಚಿತ್ರಗಳಿಗೆ ನಿರ್ಮಾಪಕರಾಗಿದ್ದರು.

ಹಮಾರಾ ಅಧಿಕಾರ್, ಸ-ರೆ-ಗ-ಮ-ಪ, ಟ್ಯಾಕ್ಸಿ ಡ್ರೈವರ್, ಇಂತೆಜಾರ್, ಹಿಂದೂಸ್ತಾನ ಕಿ ಕಸಮ್, ಚಲ್ತೆ ಚಲ್ತೆ, ದಿಲ್ ಸೆ ಮೈಲ್ ದಿಲ್, ಕಿಸ್ಮೆತ್ ಮತ್ತು ಮೈನೆ ಜೀನಾ ಸಿಖ್ ಲಿಯಾ ಅಂತಹ ಚಿತ್ರಗಳಲ್ಲಿ ವಿಶಾಲ ಕಾಣಿಸಿಕೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!