Sports

ತಂಡದಲ್ಲಿ ಮೂವರು ಹಿಟ್ಟರ್‌ಗಳಿರುವುದು ಅದ್ಭುತ: ರೋಹಿತ‌ ಶರ್ಮಾ

ನವದೆಹಲಿ, ಅ 5- ಭಾನುವಾರ ನಡೆದ ಪಂದ್ಯದಲ್ಲಿ ಸಂಘಟಿತ ಹೋರಾಟ ನಡೆಸಿದ ಮುಂಬೈ ಇಂಡಿಯನ್ಸ್ 34 ರನ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಗೆಲುವು ಸಾಧಿಸಿತು. ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್‌ ಶರ್ಮಾ, ತಂಡದಲ್ಲಿ ಮೂವರು ಪವರ್‌ ಹಿಟ್ಟರ್‌ಗಳಿರುವುದು ಅದ್ಭುತ ಎಂದು ಹೇಳಿದ್ದಾರೆ.

ಶಾರ್ಜಾ ಅಂಗಳ ಬ್ಯಾಟಿಂಗ್‌ ಸ್ನೇಹಿಯಾಗಿದೆ. ಈ ಹಿಂದೆ ಈ ಅಂಗಳದಲ್ಲಿ ಹಲವು ತಂಡಗಳು ಮಾಡಿದ್ದ ಭರ್ಜರಿ ಬ್ಯಾಟಿಂಗ್‌ ಅನ್ನು ಅರಿತ ಮುಂಬೈ ಇಂಡಿಯನ್ಸ್, ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡತು. ಅಲ್ಲದೆ, ಮೊದಲ ಬ್ಯಾಟಿಂಗ್‌ ಮೂಲಕ ಪಿಚ್‌ನ ಸಂಪೂರ್ಣ ಲಾಭವನ್ನು ಪಡೆಯಿತು. ನಿಗದಿತ 20 ಓವರ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು 208 ರನ್‌ಗಳನ್ನು ದಾಖಲಿಸಿತು. ಕ್ವಿಂಟನ್‌ ಡಿ ಕಾಕ್‌ ಸ್ಪೋಟಕ ಅರ್ಧಶತಕ ಸಿಡಿಸಿದರು.

ಮುಂಬೈ ಇಂಡಿಯನ್ಸ್‌ ತಾವು ರೂಪಿಸಿದ್ದ ಯೋಜನೆಯಂತೆ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಮಾಡಿತು. ತಂಡದ ಪವರ್‌ ಹಿಟ್ಟರ್‌ಗಳು ಇನಿಂಗ್ಸ್‌ನ ಕೊನೆಯಲ್ಲಿ ಅದ್ಭುತ ಬ್ಯಾಟಿಂಗ್‌ ಮಾಡಿದ್ದರು. ಆ ಮೂಲಕ ಬೃಹತ್‌ ಮೊತ್ತ ದಾಖಲಿಸುವಲ್ಲಿ ನೆರವಾಗಿದ್ದರು.

ಕೀರನ್‌ ಪೊಲಾರ್ಡ್ ಹಾಗೂ ಹಾರ್ದಿಕ್‌ ಪಾಂಡ್ಯ ಕ್ರಮವಾಗಿ 25* ಹಾಗೂ 28 ರನ್‌ಗಳನ್ನು ಸಿಡಿಸಿದ್ದರು. ಅಲ್ಲದೆ, ಕೃನಾಲ್‌ ಪಾಂಡ್ಯ ಕೇವಲ 4 ಎಸೆತಗಳಲ್ಲಿ 20 ರನ್‌ ಚಚ್ಚಿದ್ದರು. ಕಳೆದ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಕೃನಾಲ್‌, ಭಾನುವಾರದ ಪಂದ್ಯದಲ್ಲಿ ನಿರೀಕ್ಷೆಗೂ ಮೀರಿ ಬ್ಯಾಟಿಂಗ್‌ ಮಾಡಿದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್‌ ಶರ್ಮಾ, ತಂಡದಲ್ಲಿ ಮೂವರು ಹಿಟ್ಟರ್‌ಗಳಿರುವುದು ಅದ್ಭುತ ವಿಷಯ ಎಂದು ಹೇಳಿದರು.

“ಮೂವರು ಪವರ್‌ ಹಿಟ್ಟರ್‌ಗಳನ್ನು ಒಳಗೊಂಡಿರುವುದು ಅದ್ಭುತ ತಲೆ ನೋವು, ಆದರೆ ಫಾರ್ಮ್‌ನಲ್ಲಿರುವುದು ಇಲ್ಲಿ ಮುಖ್ಯ ವಿಷಯವಾಗಿದೆ. ಕೃನಾಲ್‌ ಪಾಂಡ್ಯ ಟೂರ್ನಿಯಲ್ಲಿ ಹೆಚ್ಚು ಬ್ಯಾಟಿಂಗ್ ಮಾಡಲಿಲ್ಲ, ಆದರೆ ಅವರು ಇಂದು (ಭಾನುವಾರ) ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಕೇವಲ ನಾಲ್ಕು ಎಸೆತಗಳಲ್ಲಿ 20 ರನ್‌ಗಳನ್ನು ಸಿಡಿಸಿದರು. ಅಂತಿಮ ಹಂತದಲ್ಲಿ 200 ರನ್‌ಗಳನ್ನು ನಾವು ಮುಟ್ಟಲು ಇದು ನೆರವಾಗಿತ್ತು,” ಎಂದು ರೋಹಿತ‌ ಶರ್ಮಾ ತಿಳಿಸಿದರು.

“ವಿಕೆಟ್‌ ನೋಡಲು ಚೆನ್ನಾಗಿಯೇ ಇತ್ತು, ಆದರೆ ಸ್ವಲ್ಪ ನಿಧಾನಗತಿಯಿಂದ ಕೂಡಿತ್ತು, ಆದರೂ 200 ರನ್‌ಗಳನ್ನು ದಾಖಲಿಸಿದ್ದು ಅದ್ಭುತ ಪ್ರಯತ್ನ. ನಮ್ಮ ಮನಸಿನಲ್ಲಿ ಯಾವುದೇ ಮೊತ್ತ ಇರಲಿಲ್ಲ. ಏಕೆಂದರೆ, ನಮ್ಮ ಬೌಲರ್‌ಗಳ ಮೇಲೆ ನಮಗೆ ನಂಬಿಕೆ ಜಾಸ್ತಿ. ಅದನ್ನೇ ಅವರು ಮಾಡಿ ಮುಗಿಸಿದರು. ನನ್ನ ಬ್ಯಾಟಿಂಗ್‌ ಮಿಸ್‌ ಆಯಿತು. ಹುಡುಗರ ಅತ್ಯುತ್ತಮ ಪ್ರಯತ್ನದಿಂದ ಅಷ್ಟು ದೊಡ್ಡ ಮೊತ್ತ ಕಲೆ ಹಾಕಲು ಸಾಧ್ಯವಾಯಿತು,” ಎಂದು ಎಂದು ಶ್ಲಾಘಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!