Lucknow

ಸರ್ಕಾರವು ಸೊಕ್ಕಿನ ಮತ್ತು ಸರ್ವಾಧಿಕಾರಿ ಮನೋಭಾವ ಬದಲಿಸಿಕೊಳ್ಳಬೇಕು: ಮಾಯಾವತಿ

ಲಖನೌ, ಅ 5- ಉತ್ತರ ಪ್ರದೇಶ ಸರ್ಕಾರವು ಸೊಕ್ಕಿನ ಮತ್ತು ಸರ್ವಾಧಿಕಾರ ಮನೋಭಾವ ಬದಲಿಸಿಕೊಳ್ಳಬೇಕು ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಸಲಹೆ ನೀಡಿದ್ದು, ಸಂತ್ರಸ್ತೆಯ ಕುಟುಂಬಕ್ಕೆ ತ್ವರಿತವಾಗಿ ನ್ಯಾಯ ದೊರಕಿಸಿಕೊಡುವಲ್ಲಿ ಮಹತ್ತರ ಪಾತ್ರ ವಹಿಸಬೇಕು ಎಂದು ಹೇಳಿದ್ದಾರೆ.

ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ, ಬಿಎಸ್ಪಿ ನಿಯೋಗವೊಂದು ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿ ಸೆಪ್ಟೆಂಬರ್ 28 ರಂದು ಸತ್ಯಗಳ ಬಗ್ಗೆ ಮಾಹಿತಿ ಪಡೆಯಿತು ಎಂದು ಅವರು ತಿಳಿಸಿದ್ದಾರೆ.

ಕಳೆದ ಒಂದೆರಡು ದಿನಗಳಲ್ಲಿ ಮಾಧ್ಯಮಗಳನ್ನು ನಡೆಸಿಕೊಂಡಿರುವ ರೀತಿ ಹಾಗೂ ಪ್ರತಿಪಕ್ಷ ನಾಯಕರ ಮೇಲಿನ ಪೊಲೀಸ್ ಲಾಠಿಚಾರ್ಜ್ ಅತ್ಯಂತ ಖಂಡನೀಯ ಮತ್ತು ಅವಮಾನಕರವಾಗಿದೆ.

ಸರ್ಕಾರ ತನ್ನ ಸೊಕ್ಕಿನ ಮತ್ತು ಸರ್ವಾಧಿಕಾರಿ ಮನೋಭಾವವನ್ನು ಬದಲಾಯಿಸುವಂತೆ ನಾನು ಸಲಹೆ ನೀಡುತ್ತೇನೆ. ಇಲ್ಲವಾದರೆ ಪ್ರಜಾಪ್ರಭುತ್ವದ ಬೇರುಗಳು ದುರ್ಬಲಗೊಳ್ಳುತ್ತವೆ ಎಂದು ಮಾಯಾವತಿ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!