New Delhi

ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ; ಪುಣೆಯ ಚಿರಾಗ ಟಾಪರ್

ನವದೆಹಲಿ, ಅ 5- ಜೆಇಇ ಮುಖ್ಯ ಪರೀಕ್ಷೆ-2020ಯ ಫಲಿತಾಂಶ ಪ್ರಕಟಗೊಂಡಿದ್ದು, ಪುಣೆಯ ಚಿರಾಗ ಫಲೋರ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಐಐಟಿ ಬಾಂಬೆ ವಲಯದಿಂದ ಜೆಇಇ ಪರೀಕ್ಷೆ ಬರೆದಿದ್ದ ಚಿರಾಗ 396 ಅಂಕಗಳಿಗೆ 352 ಅಂಕ ಪಡೆದಿದ್ದಾರೆ. ವಿದ್ಯಾರ್ಥಿನಿಯರ ವಿಭಾಗದಲ್ಲಿ ಐಐಟಿ ರೂರ್ಕಿ ವಲಯದಿಂದ ನಿಂದ ಪರೀಕ್ಷೆ ಬರೆದಿದ್ದ ಕನಿಷ್ಕಾ ಮಿತ್ತಲ್ 396 ಅಂಕಗಳಿಗೆ 315 ಅಂಕಗಳನ್ನು ಪಡೆದು ಟಾಪರ್ ಆಗಿ ಹೊರಹೊಮ್ಮಿದ್ದಾರೆ.

36 ಸಾವಿರ ಬಾಲಕರು ಮತ್ತು 6ಸಾವಿರದ 707 ಬಾಲಕಿಯರು ತೇರ್ಗಡೆಯಾಗಿದ್ದಾರೆ. ಕೇಂದ್ರ ಸಚಿವ ರಮೇಶ ಪೋಖ್ರಿಯಾಲ್ ನಿಶಾಂಕ್ ಜೆಇಇ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸೆ.27 ರಂದು ಜೆಇಇ ಮುಖ್ಯಪರೀಕ್ಷೆ ನಡೆದಿತ್ತು. ಒಂದು ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ವೆಬ್ ಸೈಟ್ ನಲ್ಲೂ ಸಹ ಫಲಿತಾಂಶ ನೋಡಬಹುದಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!