New Delhi

ಯಡಿಯೂರಪ್ಪ ಸರ್ಕಾರದ ಭ್ರಷ್ಟಾಚಾರವನ್ನು ಸಿಬಿಐ ಹೊರತೆಗೆಯಲಿ : ಸುರ್ಜೆವಾಲ

ನವದೆಹಲಿ,,ಅ 5- ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮನೆ ಮೇಲೆ ಸಿಬಿಐ ದಾಳಿ ನಡೆಸಲಾಗಿದೆ. ಇಡಿ ನಂತರ ಅವರಿಗೆ ಸಿಬಿಐ ಕಾಟ ಶುರುವಾಗಿದೆ. ಈ ನಡುವೆ ರಾಜಕೀಯ ಕಾರಣಗಳಿಗಾಗಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಕಾಂಗ್ರೆಸ್ ನಾಯಕರ ಮೇಲೆ ನಿರಂತರ ದಾಳಿ ಮಾಡಲಾಗುತ್ತಿದೆ ಇದಕ್ಕೆ ನಾವು ಹೆದರುವುದಿಲ್ಲ ನಿಜವಾಗಿ ಭಷ್ಟಾಚಾರ ನಿಗ್ರಹ ಮಾಡುವುದಿದ್ದರೆ ಯಡಿಯೂರಪ್ಪ ಸರ್ಕಾರದ ಭ್ರಷ್ಟಾಚಾರವನ್ನು ಸಿಬಿಐ ಹೊರ ತೆಗೆಯಲಿ ಎಂದು ಪಕ್ಷದ ವಕ್ತಾರ ರಣದೀಪ ಸುರ್ಜೆವಾಲ ಟ್ವೀಟ್ ಮಾಡಿದ್ದಾರೆ.

ಬೆಳ್ಳಂಬೆಳಗ್ಗೆ ಡಿ.ಕೆ. ಶಿವಕುಮಾರ ಮತ್ತು ಅವರ ಸಹೋದರ ಸಂಸದ ಡಿ.ಕೆ ಸುರೇಶ ಅವರ ಮನೆಗಳ ಮೇಲೆ ಮೇಲೆ ಸಿಬಿಐ ದಾಳಿ ಮಾಡಲಾಗಿದ್ದರ ಬಗ್ಗೆ ಅವರು ಪ್ರತಿಕ್ರಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!