Sports

ನಡಾಲ್ ಕ್ವಾರ್ಟರ್ ಫೈನಲ್ಸ್ ಗೆ

ಪ್ಯಾರೀಸ್, ಅ.4- ಭರ್ಜರಿ ಫಾರ್ಮ್ ನಲ್ಲಿರುವ ಹಾಲಿ ಚಾಂಪಿಯನ್ ವಿಶ್ವದ ಎರಡನೇ ಶ್ರೇಯಾಂಕಿತ ರಫೇಲ್ ನಡಾಲ್ ಅವರು ಫ್ರೆಂಚ್ ಓಪನ್ ಗ್ರ್ಯಾನ್ ಸ್ಲ್ಯಾಮ್ ಟೆನಿಸ್ ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್ಸ್ ನಲ್ಲಿ ಜಯ ಸಾಧಿಸಿ ಮುನ್ನಡೆದಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ನಡಾಲ್ 6-1, 6-1, 6-2 ರಿಂದ ಸೆಬಾಸ್ಟಿಯನ್ ಕೊರ್ಡಾ ಅವರನ್ನು ಒಂದು ಗಂಟೆ 55 ನಿಮಿಷದ ಹೋರಾಟದಲ್ಲಿ ಜಯ ಸಾಧಿಸಿದರು. ಏಕಪಕ್ಷೀಯ ಪಂದ್ಯದಲ್ಲಿ ನಡಾಲ್ ಸೊಗಸಾದ ಪ್ರದರ್ಶನ ನೀಡಿ ಜಯ ಸಾಧಿಸಿದರು. ನಡಾಲ್ 14ನೇ ಬಾರಿಗೆ ಟೂರ್ನಿಯ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ.

2005, 2006, 2007, 2008, 2010, 2011, 2012, 2013, 2014, 2017, 2018, 2019 ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು.

ಇನ್ನೊಂದು ಪುರುಷರ 16ನೇ ಘಟ್ಟದ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ 3-6, 6-3, 6-4, 3-6 ರಿಂದ ಇಟಲಿಯ ಜಾನಿಕ್ ಸಿನ್ನರ್ ಅವರ ವಿರುದ್ಧ ಸೋಲು ಕಂಡರು. 19 ವರ್ಷದ ಜಾನಿಕ್ ಸಿನ್ನರ್ ಸೊಗಸಾದ ಆಟವಾಡಿ 4 ಸೆಟ್ ಗಳಲ್ಲಿ ಪಂದ್ಯವನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಜ್ವೆರೆವ್ ಮುನ್ನಡೆಯ ಕನಸಿಗೆ ಪೆಟ್ಟು ಬಿದ್ದಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!