Sports

ಮುಂಬಯಿ ಇಂಡಿಯನ್ಸ್ ಗೆ 34 ರನ್ ಗೆಲುವು

ಶಾರ್ಜಾ, ಅ.4-
ಕ್ವಿಂಟನ್ ಡಿ ಕಾಕ್ (67) ಅವರ ಅರ್ಧಶತಕದ ಜತೆಗೆ ಸಂಘಟಿತ ಬೌಲಿಂಗ್ ನಿರ್ವಹಣೆ ತೋರಿದ ಮುಂಬಯಿ ಇಂಡಿಯನ್ಸ್ ಐಪಿಎಲ್ 13ನೇ ಆವೃತ್ತಿಯ 17 ಪಂದ್ಯದಲ್ಲಿ 34 ರನ್ ಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಮೂರನೇ ಜಯದ ಸವಿಯುಂಡಿತು.

ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬಯಿ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕಿತು. ನಂತರ ಕಠಿಣ ಗುರಿ ಬೆನ್ನಟ್ಟಿದ ಹೈದರಾಬಾದ್ 20 ಓವರ್ ಗಳಲ್ಲಿ 7 ವಿಕೆಟ್ ಗೆ 174 ರನ್ ಗಳಿಸಲಷ್ಟೇ ಶಕ್ತಗೊಂಡು ಹ್ಯಾಟ್ರಿಕ್ ಗೆಲುವಿನ ಅವಕಾಶವನ್ನು ಕಳೆದುಕೊಂಡಿತು.

ಡೇವಿಡ್ ವಾರ್ನರ್(60) ಸೇರಿದಂತೆ ಅಗ್ರ ಕ್ರಮಾಂಕದ ಆಟಗಾರರು ಅಲ್ಪ ಹೋರಾಟ ತೋರಿದರಾದರೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ವೈಫಲ್ಯ ಕಂಡ ಕಾರಣ ಗುರಿ ಬೆನ್ನಟ್ಟುವಲ್ಲಿ ಸನ್ ರೈಸರ್ಸ್ ವಿಫಲಗೊಂಡಿತು. ಮುಂಬಯಿ ಪರ ಮಿಂಚಿದ ಬೌಲ್ಟ್, ಪ್ಯಾಟಿನ್ಸನ್ ಮತ್ತು ಬುಮ್ರಾ ತಲಾ 2 ವಿಕೆಟ್ ಉರುಳಿಸಿ ತಂಡದ ಗೆಲುವನ್ನು ಸುಲಭಗೊಳಿಸಿದರು.

ಕ್ವಿಂಟನ್ ಡಿ ಕಾಕ್ ಅರ್ಧಶತಕದ ಮಿಂಚು
ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಜತೆ ಇನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಕೇವಲ 6 ರನ್ ಗಳಿಗೆ ಸಂದೀಪ್ ಶರ್ಮಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಆದರೆ ಕಳೆದ ನಾಲ್ಕು ಪಂದ್ಯಗಳಿಂದ ನಿರೀಕ್ಷಿತ ಪ್ರದರ್ಶನ ನೀಡದ ಡಿಕಾಕ್ ಎದುರಾಳಿ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು.

ಸೂರ್ಯಕುಮಾರ್ ಯಾದವ್ (27) ಜತೆ 2ನೇ ವಿಕೆಟ್ ಗೆ 42 ರನ್ ಕೂಡಿಹಾಕಿದ ಡಿ ಕಾಕ್, 3ನೇ ವಿಕೆಟ್ ಗೆ ಈಶನ್ ಕಿಶಾನ್ (31) 78 ರನ್ ಗಳ ಅಮೂಲ್ಯ ಜತೆಯಾಟದ ಕೊಡುಗೆ ನೀಡಿ ತಂಡದ ಬೃಹತ್ ಮೊತ್ತಕ್ಕೆ ವೇದಿಕೆ ನಿರ್ಮಿಸಿದರು. ಆದರೆ 39 ಎಸೆತಗಳಲ್ಲಿ ತಲಾ 4 ಫೋರ್ , ಸಿಕ್ಸರ್ ಸಿಡಿಸಿದ ಡಿ ಕಾಕ್ ಅಂತಿಮವಾಗಿ 67 ರನ್ ಗಳಿಸಿ ಸ್ಪಿನ್ನರ್ ರಶೀದ್ ಖಾನ್ ಗೆ ವಿಕೆಟ್ ಒಪ್ಪಿಸಿದರು.

ಪಾಂಡೆ, ಪೊಲಾರ್ಡ್ ಅಬ್ಬರದ ಆಟ
ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟ ಕಾರಣ ಮಧ್ಯಮ ಕ್ರಮಾಂಕದ ಪೊಲಾರ್ಡ್ (ಅಜೇಯ 25 ರನ್ , 13 ಎಸೆತ ), ಕೃಣಾಲ್ (20 ರನ್ 4 ಎಸೆತ) ಅಬ್ಬರದ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಸ್ಕೋರ್ ವಿವರ
ಮುಂಬಯಿ ಇಂಡಿಯನ್ಸ್: 20 ಓವರ್ ಗಳಲ್ಲಿ 5 ವಿಕೆಟ್ ಗೆ 208
ರೋಹಿತ್ ಶರ್ಮ ಸಿ ಬೈರ್ ಸ್ಟೋವ್ ಬಿ ಸಂದೀಪ್ 06
ಕ್ವಿಂಟನ್ ಡಿ ಕಾಕ್ ಸಿ ಮತ್ತು ಬಿ ರಶೀದ್ ಖಾನ್ 67
ಸೂರ್ಯಕುಮಾರ್ ಯಾದವ್ ಸಿ ನಟರಾಜನ್ ಬಿ ಕೌಲ್ 27
ಈಶನ್ ಕಿಶಾನ್ ಸಿ ಪಾಂಡೆ ಬಿ ಸಂದೀಪ್ 31
ಹಾರ್ದಿಕ್ ಪಾಂಡ್ಯ ಬಿ ಕೌಲ್ 28
ಕೀರನ್ ಪೊಲಾರ್ಡ್ ಔಟಾಗದೆ 25
ಕೃಣಾಲ್ ಪಾಂಡೆ ಔಟಾಗದೆ 20
ಇತರ: 04 (ಲೆಗ್ ಬೈ 1, ವೈಡ್-2, ನೋಬಾಲ್ -1)
ವಿಕೆಟ್ ಪತನ :1-6, 2-48, 3-126, 4-147, 5-188.

ಬೌಲಿಂಗ್ ವಿವರ
ಸಂದೀಪ್ ಶರ್ಮ 4 0 41 2
ಟಿ.ನಟರಾಜನ್ 4 0 29 0
ಸಿದ್ಧಾರ್ಥ್ ಕೌಲ್ 4 0 64 2
ಅಬ್ದುಲ್ ಸಮದ್ 2 0 27 0
ರಶೀದ್ ಖಾನ್ 4 0 22 1
ಕೇನ್ ವಿಲಿಯಮ್ಸನ್ 2 0 24 0

ಸನ್ ರೈಸರ್ಸ್ ಹೈದರಾಬಾದ್:
20 ಓವರ್ ಗಳಲ್ಲಿ 7 ವಿಕೆಟ್ ಗೆ 174

ಡೇವಿಡ್ ವಾರ್ನರ್ ಸಿ ಈಶನ್ ಬಿ ಪ್ಯಾಟಿನ್ಸನ್ 60
ಜಾನಿ ಬೈರ್ ಸ್ಟೋವ್ ಸಿ ಹಾರ್ದಿಕ್ ಬಿ ಬೌಲ್ಟ್ 25
ಮನೀಶ್ ಪಾಂಡೆ ಸಿ ಪೊಲಾರ್ಡ್ ಬಿ ಪ್ಯಾಟಿನ್ಸನ್ 30
ಕೇನ್ ವಿಲಿಯಮ್ಸ್ ಸಿ ಡಿ ಡಾಕ್ ಬಿ ಬೌಲ್ಟ್ 03
ಪ್ರಿಯಮ್ ಗಾರ್ಗ್ ಸಿ ರಾಹುಲ್ ಬಿ ಕೃಣಾಲ್ 08
ಅಭಿಷೇಕ್ ಶರ್ಮ ಬಿ ಬುಮ್ರಾ 10
ಅಬ್ದುಲ್ ಸಮದ್ ಸಿ ರೋಹಿತ್ ಬಿ ಬುಮ್ರಾ 20
ರಶೀದ್ ಖಾನ್ ಔಟಾಗದೆ 03
ಸಂದೀಪ್ ಶರ್ಮ ಔಟಾಗದೆ 00
ಇತರ : 15 (ಲೆಗ್ ಬೈ-5, ವೈಡ್ -10)
ವಿಕೆಟ್ ಪತನ : 1-34, 2-94, 3-116, 4-130, 5-142, 6-168, 7-172.

ಬೌಲಿಂಗ್ ವಿವರ
ಟ್ರೆಂಟ್ ಬೌಲ್ಟ್ 4 0 28 2
ಜೇಮ್ಸ್ ಪ್ಯಾಟಿನ್ಸನ್ 4 0 29 2
ಕೃಣಾಲ್ ಪಾಂಡ್ಯ 4 0 35 1
ಜಸ್ ಪ್ರೀತ್ ಬುಮ್ರಾ 4 0 41 2
ಕೀರನ್ ಪೊಲಾರ್ಡ್ 3 0 20 0
ರಾಹಲ್ ಚಾಹರ್ 1 0 16 0
ಫಲಿತಾಂಶ: ಮುಂಬಯಿ ಇಂಡಿಯನ್ಸ್ ಗೆ 34 ರನ್ ಜಯ

Related Articles

Leave a Reply

Your email address will not be published. Required fields are marked *

Back to top button
error: Content is protected !!