New Delhi

ಅಧಿಕಾರಕ್ಕೆ ಬಂದಲ್ಲಿ ಅಂಬಾನಿ, ಅದಾನಿ ಕೈಗೊಂಬೆ ಮೋದಿ ಸರ್ಕಾರದ ಕೃಷಿ ಮಸೂದೆ ರದ್ದು; ರಾಹುಲ್

ಬಂದ್ನಿ ಕಾಲನ್‌(ಮೋಗಾ), ಅ 4- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳ ವಿರುದ್ಧ ‘ಖೇತಿ ಬಚಾವ್‌ ಯಾತ್ರೆ’ ಆರಂಭಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಅಂಬಾನಿ ಮತ್ತು ಅದಾನಿಯಂತಹ ದೊಡ್ಡ ಕಾರ್ಪೊರೇಟ್‌ ಉದ್ಯಮಿಗಳ ಹಿಡಿತದಿಂದ ರೈತರನ್ನು ರಕ್ಷಿಸುವ ವಾಗ್ದಾನ ಮಾಡಿದ್ದಾರೆ.

ಮೋಗಾದ ಸಾರ್ವಜನಿಕ ಜಾಥಾದಲ್ಲಿ ಮೋದಿ ಸರ್ಕಾರ ಅದಾನಿ ಮತ್ತು ಅಂಬಾನಿಗಳ ಕೈಗೊಂಬೆಯಾಗಿದೆ ಎಂದು ಟೀಕಿಸಿರುವ ರಾಹುಲ್‌, ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ದಿನವೇ ಈ ಮೂರು ‘ಕಪ್ಪು ನೀತಿ’ಗಳನ್ನು ರದ್ದುಪಡಿಸಿ, ಕಸದ ಬುಟ್ಟಿಗೆ ಎಸೆಯಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಜನತೆಗೆ ಸುಳ್ಳು ಹೇಳಿದ್ದಾರೆ ಮತ್ತು ಕೇವಲ ಎರಡು ಮೂರು ಕಾರ್ಪೊರೇಟ್‌ ಕಂಪನಿಗಳ ಹಿತಾಸಕ್ತಿಗಾಗಿ ಕಳೆದ 6 ವರ್ಷಗಳಿಂದ ದೇಶದ ದಾರಿ ತಪ್ಪಿಸುತ್ತಿದ್ದಾರೆ. ನೋಟು ಅಮಾನ್ಯೀಕರಣ, ಜಿಎಸ್‌ಟಿ ಮತ್ತು ಕೋವಿಡ್‌ ನಡುವೆ ದೊಡ್ಡ ಉದ್ಯಮಿಗಳ ತೆರಿಗೆ ವಿನಾಯ್ತಿ ನೀತಿಗಳನ್ನು ಜಾರಿಗೆ ತಂದಿರುವ ಸರ್ಕಾರ, ಬಡವರು ಮತ್ತು ರೈತರಿಗೆ ಯಾವುದೇ ನೆರವು ನೀಡಿಲ್ಲ ಎಂದು ಆರೋಪಿಸಿದರು.

ಇದು ನಿಮ್ಮ ಭೂಮಿ ಮತ್ತು ಹಣಕ್ಕೆ ಸಂಬಂಧಿಸಿದ್ದಾಗಿದೆ. ಯುಪಿಎ ಸರ್ಕಾರ ರೈತರ ಹಿತಕ್ಕಾಗಿ ಭೂಸ್ವಾಧೀನ ಮಸೂದೆಗೆ ತಿದ್ದುಪಡಿ ತಂದಿದ್ದೆವು. ಆದರೆ, ಮೋದಿ ಸರ್ಕಾರ ಅದನ್ನು ರದ್ದುಗೊಳಿಸಿದೆ ಎಂದರು.

ಅದಾನಿ ಮತ್ತು ಅಂಬಾನಿಗಳು ನಿಮ್ಮ ಭೂಮಿ ಮತ್ತು ಹಣವನ್ನು ರೈತರಿಂದ ಕಸಿದುಕೊಂಡು, ಮರಳಿ ಏನನ್ನೂ ನೀಡುವುದಿಲ್ಲ. ಇದಕ್ಕೆ ಪ್ರಧಾನಿ ನಿರಂತರ ಮಾಧ್ಯಮ ಪ್ರಸಾರದೊಂದಿಗೆ ನೆರವು ನೀಡುತ್ತಿದ್ದಾರೆ ಎಂದು ಟೀಕಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!