Belagavi

ಮಾಜಿ ಶಾಸಕ ಬಿ ವೈ ಪಾಟೀಲ ನಿಧನ

ಬೆಳಗಾವಿ, ೪- ಬೆಳಗಾವಿ ಜಿಲ್ಲೆಯ ಮಾಜಿ ಶಾಸಕ ಬಿ ವೈ ಪಾಟೀಲ ಅನಾರೋಗ್ಯದ ಕಾರಣಕ್ಕೆ ನಿಧನರಾಗಿದ್ದಾರೆ. ಅವರಿಗೆ 75 ವರುಷ ವಯಸಾಗಿತ್ತು.

ಅನಾರೋಗ್ಯದ ನಿಮಿತ್ತ ತಮ್ಮ ಮನೆಯಲ್ಲೇ ಚಿಕಿತ್ಸೆಪಡೆಯುತಿದ್ದ ಅವರು ಇಂದು ಭಾನುವಾರ ಬೆಳಗಿನ ಜಾವ ನಿಧನರಾದರು. ಅವರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗು ಮೂವರು ಸಹೋದರರನ್ನು ಅಗಲಿದ್ದಾರೆ.

ಆಗಿನ ಉಚಗಾವಿ (ಈಗಿನ ಬೆಳಗಾವಿ ಗ್ರಾಮೀಣ) ಕ್ಷೇತ್ರವನ್ನು ನಾಲ್ಕುಬಾರಿ 1983 ರಿಂದ 1994 ರ ವರೆಗೆ ಪಕ್ಷೇತರ ಅಭ್ಯರ್ಥಿಯಾಗಿ, ಮಹಾರಾಷ್ಟ್ರ ಏಕೀಕರಣ ಸಮಿತಿಯ ಬೆಂಬಲದಿಂದ ಪ್ರತಿನಿಧಿಸಿದ್ದರು.

ಶಾಸಕರಾಗಿದಾಗ್ಯೂ ಸಾಮಾನ್ಯರಂತೆ ಬದುಕಿದ್ದ ಅವರು ಜನಾನುರಾಗಿಯಾಗಿದ್ದರು. ಅವರ ಅಂತ್ಯಕ್ರಿಯೆ ಇಂದು ಸಂಜೆ ಜರುಗಲಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!