Belagavi

ತಮ್ಮ ಕೌಟುಂಬಿಕ ಕಲಹಕ್ಕೆ ಮನೆ ಅಡುಗೆ ಕೆಲಸದವಳು ಕಾರಣ -ಚಿತ್ರಸಾಹಿತಿ ಕಲ್ಯಾಣ

ಬೆಳಗಾವಿ, ೪- ತಮ್ಮ ಕೌಟುಂಬಿಕ ಕಲಹಕ್ಕೆ ಮನೆ ಅಡುಗೆಗೆಲಸದಕ್ಕೆ ನೇಮಿಸಿಕೊಂಡಿದ್ದ ಗಂಗಾ ಕುಲಕರ್ಣಿ ಕಾರಣ. ಅವಳಿಂದಲೇ ಇಷ್ಟೆಲ್ಲ ಸಮಸ್ಯೆಯುಂಟಾಗಿದೆ ಎಂದು ಖ್ಯಾತ ಗೀತ ಸಾಹಿತಿ ಕೆ.ಕಲ್ಯಾಣ ತಿಳಿಸಿದ್ದಾರೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ತಾವು, ಪತ್ನಿ ಮತ್ತು ಅವಳ ತಂದೆ, ತಾಯಿ ಒಟ್ಟಿಗೆ ಇರುತ್ತಿದ್ದೆವು. ಗಂಗಾ ಮನೆ ಅಡುಗೆ ಕೆಲಸಕ್ಕೆಂದು ನೇಮಿಸಿಕೊಂಡ ನಂತರ ಕುಟುಂಬದಲ್ಲಿ ಬದಲಾವಣೆ ಆರಂಭವಾಯಿತು.

ಬಾಗಲಕೋಟದಲ್ಲಿಯ ಶಿವಾನಂದ ವಾಲಿ ಎನ್ನುವವರೊಬ್ಬರು ತನಗೆ ಬೇಕಾದ ಗುರೂಜಿ ಇದ್ದಾರೆ. ಅವರು ಎಲ್ಲ ಸಮಸ್ಯೆ ಪರಿಹರಿಸುತ್ತಾರೆ ಎಂದು ಹೇಳಿ ಅತ್ತೆಯ ಮನಸ್ಸನ್ನು ಆಕೆ ತಿರುಗಿಸಿದಳು.

ಅತ್ತೆ ಮಧ್ಯ ರಾತ್ರಿ ಪೂಜೆ ಮಾಡಲು ಆರಂಭಿಸಿದರು. ಪತ್ನಿ ಅಶ್ವಿನಿ ಬ್ಯಾಂಕ್ ಖಾತೆಯಿಂದ ಲಕ್ಷ ಲಕ್ಷ ಹಣ ಶಿವಾನಂದ ವಾಲಿ ಹೆಸರಿಗೆ ವರ್ಗಾವಣೆಯಾಗಿದೆ. ಅತ್ತೆ, ಮಾವನ ಹೆಸತಿನಲ್ಲಿದ್ದ ಆಸ್ತಿ ಕೂಡ ಶಿವಾನಂದ ವಾಲಿ ಹೆಸರಿಗೆ ವರ್ಗವಾಗಿದೆ.

ಮಾಟ ಮಂತ್ರ ಹೆಸರಿನಲ್ಲಿ ಗಂಗಾ ಮತ್ತು ಶಿವಾನಂದ ವಾಲಿ ಸೇರಿ ನಮ್ಮ ಸಂಸಾರವನ್ನು ಹಾಳು ಮಾಡಿದ್ದಾರೆ ಎಂದು ತಿಳಿಸಿದರು. ಅಶ್ವಿನಿ ತಮ್ಮಿಂದ ಮಾತ್ರವಲ್ಲ, ನಮ್ಮ ಸಂಬಂಧಿಕರಿಂದಲೂ ಹಣ ಪಡೆದು ಶಿವಾನಂದ ವಾಲಿ ಹೆಸರಿಗೆ ವರ್ಗಾಯಿಸಿದ್ದಾರೆ. 14 ವರ್ಷದ ತಮ್ಮ ವೈವಾಹಿಕ ಜೀವನ ಇವರಿಂದ ಹಾಳಾಗಿದೆ.

ಈಚೆಗೆ ಪತ್ನಿ ಮತ್ತು ಅವರ ತಂದೆ, ತಾಯಿ ಬೆಳಗಾವಿಗೆ ಹೋಗಿ ಬರುತ್ತೇವೆ ಎಂದು ಬಂದವರು ತಮ್ಮ ಹಾಗೂ ತಮ್ಮ ಸಂಬಂಧಿಕರೆಲ್ಲರ ಸಂಪರ್ಕ ಕಡಿದುಕೊಂಡರು. ಅಲ್ಲಿಂದ ಸಮಸ್ಯೆ ತೀವ್ರವಾಯಿತು. ಶಿವಾನಂದ ವಾಲಿ ವಿರುದ್ಧ ನಾನು ಅಪಹರಣ ಪ್ರಕರಣ ದಾಖಲಿಸಿ, ಆತನನ್ನು ಪೊಲೀಸರು ವಶಕ್ಕೆ ಪಡೆದ ನಂತರ ಪತ್ನಿ ತಮ್ಮ ವಿರುದ್ಧ ಆರೋಪಗಳನ್ನು ಮಾಡತೊಡಗಿದ್ದಾರೆ ಎಂದೂ ಕಲ್ಯಾಣ್ ತಿಳಿಸಿದರು.

ತಮ್ಮ ಸಂಸಾರ ಪುನಃ ಸರಿಹೋಗುವ ವಿಶ್ವಾಸ ಹೊಂದಿರುವ ಕಲ್ಯಾಣ “ನಮ್ಮ ಸಂಸಾರ ಸರಿ ಹೋಗುತ್ತದೆ. ಪೊಲೀಸರು, ನ್ಯಾಯಾಲಯ ಎಲ್ಲವನ್ನೂ ಸರಿಮಾಡುತ್ತದೆ. ಮತ್ತೆ ನಾನು ಪತ್ನಿಯೊಂದಿಗೆ ಬಂದು ಪತ್ರಿಕಾಗೋಷ್ಠಿ ನಡೆಸುತ್ತೇನೆ. ಆಕೆ ಒಳ್ಳೆಯ ಗಾಯಕಿ. ಅವಳಿಂದ ಒಳ್ಳೆಯ ಹಾಡು ಹೇಳಿಸುತ್ತೇನೆ” ಎಂದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!