New Delhi

ಕೇಂದ್ರ ಸಚಿವ ಪಾಸ್ವಾನ್‍ಗೆ ದೆಹಲಿಯಲ್ಲಿ ಹೃದಯ ಶಸ್ತ್ರಚಿಕಿತ್ಸೆ

ನವದೆಹಲಿ, ಅ 4- ೭೪ ವಷ೯ದ ಕೇಂದ್ರ ಸಚಿವ ರಾಮ ವಿಲಾಸ ಪಾಸ್ವಾನ್‍ ಅವರು ದೆಹಲಿಯ ಆಸ್ಪತ್ರೆಯೊಂದರಲ್ಲಿ ಶನಿವಾರ ರಾತ್ರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ ಎಂದು ಅವರ ಪುತ್ರ ಹಾಗೂ ಲೋಕಜನಶಕ್ತಿ ಪಕ್ಷ(ಎಲ್‍ಜೆಪಿ) ಅಧ್ಯಕ್ಷ ಚಿರಾಗ ಪಾಸ್ವಾನ ಭಾನುವಾರ ತಿಳಿಸಿದ್ದಾರೆ.

ಅಗತ್ಯವಾದಲ್ಲಿ ಮುಂದಿನ ವಾರಗಳಲ್ಲಿ ತಮ್ಮ ತಂದೆಗೆ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಬಹುದು ಎಂದು ಅವರು ಹೇಳಿದ್ದಾರೆ.

‘ಕಳೆದ ಹಲವು ದಿನಗಳಿಂದ ತಂದೆಯವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ . ನಿನ್ನೆ ಸಂಜೆ ಕೆಲವು ಹಠಾತ್ ಆರೋಗ್ಯ ತೊಂದರೆಗಳಿಂದ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.’ ಚಿರಾಗ ಪಾಸ್ವಾನ ಹೇಳಿದ್ದಾರೆ.

‘ಈ ಸಮಯದಲ್ಲಿ ನನ್ನ ಮತ್ತು ನನ್ನ ಕುಟುಂಬದವರೊಂದಿಗೆ ನಿಂತಿದ್ದ ಎಲ್ಲರಿಗೂ ಧನ್ಯವಾದಗಳು.’ ಎಂದು ಅವರು ಹೇಳಿದ್ದಾರೆ.

ಶನಿವಾರ ಚಿರಾಗ್ ಪಾಸ್ವಾನ್ ಬಿಹಾರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಭೆಯಲ್ಲಿ ಹಾಜರಾಗಲು ಪಾಟ್ನಾದಲ್ಲಿದ್ದರು. ಆದರೆ ಅವರ ತಂದೆಯ ಆರೋಗ್ಯ ಸಮಸ್ಯೆಗಳಿಂದ ಮತ್ತೆ ದೆಹಲಿಗೆ ಧಾವಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!