Washington

ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ; ಟ್ರಂಪ್ ಆರೋಗ್ಯ ಸ್ಥಿತಿ ಗಂಭೀರ

ವಾಷಿಂಗ್ಟನ್, 4- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಅವರಿನ್ನೂ ಅಪಾಯದಿಂದ ಸಂಪೂರ್ಣ ಹೊರಬಂದಿಲ್ಲ.

ಅವರ ಆರೋಗ್ಯದ ವೈದ್ಯರ ತಂಡ ನಿರಂತವಾಗಿ ಪರಿಶೀಲಿಸುತ್ತಿದೆ. ಮುಂದಿನ 48 ಗಂಟೆಗಳ ಅವಧಿ ಟ್ರಂಪ್ ಪಾಲಿಗೆ ಬಹಳ ಮಹತ್ವವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಟ್ರಂಪ್ ಅವರನ್ನು ಹೆಲಿಕಾಪ್ಟರ್ ಮೂಲಕ ವಾಲ್ಟರ್ ರೀಡ್ ಸೇನಾ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಡೊನಾಲ್ಡ್ ಟ್ರಂಪ್ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಟ್ರಂಪ್ ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರೂ ಅಪಾಯದಿಂದ ಸಂಪೂರ್ಣ ಹೊರಬಂದಿಲ್ಲವಾದರೂ, ಅವರ ಆರೋಗ್ಯದ ಬಗ್ಗೆ ನಾವು ಆಶಾವಾದಿಯಾಗಿದ್ದೇವೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ನಿರಂತರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ವೇಳೆ ಉನ್ನತ ಸಲಹೆಗಾರ ಹಿಕ್ಸ್ ಬಿಡುವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದರು. ಹಿಕ್ಸ್ ಜೊತೆಯಲ್ಲಿ ಟ್ರಂಪ್ ಇದ್ದ ಕಾರಣ ಸೋಂಕು ತಗುಲಿದೆ ಇದರಿಂದಾಗಿ ಅವರ ಪ್ರಚಾರಕ್ಕೆ ಬಹಳ ಹಿನ್ನಡೆಯಾಗಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

Back to top button
error: Content is protected !!