Belagavi

ಅಂತಾರಾಜ್ಯ ಬಸ್ ಸಂಚಾರ ಪುನಾರಂಭ

ಬೆಳಗಾವಿ : ಲಾಕ್‍ಡೌನಗಿಂತ ಪೂರ್ವದಲ್ಲಿದಂತೆ ಬೆಳಗಾವಿ ವಿಭಾಗದ ಎಲ್ಲ ನಿಲ್ದಾಣಗಳಿಂದ ಅಂತಾರಾಜ್ಯ ಬಸ್ ಸಂಚಾರ ಪುನಃ ಆರಂಭಿಸಲಾಗಿದೆ.

ಬೆಳಗಾವಿ-ಚೆನ್ನೈ ಮಲ್ಟಿ ಎಕ್ಸಲ್ ಸಾರಿಗೆಯನ್ನು ಹೊರತು ಪಡಿಸಿ ಬಸ್ ಸಂಚಾರ ಪುನಃ ಪ್ರಾರಂಭಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್. ಮುಂಜಿ ಅವರು ತಿಳಿಸಿದ್ದಾರೆ.

ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಅಂತರಾಜ್ಯ ಸಾರಿಗೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ನಿರ್ಬಂಧ ತೆರವುಗೊಂಡದ್ದರಿಂದ ವಿಭಾಗದ ಎಲ್ಲ ಬಸ್ ನಿಲ್ದಾಣಗಳಿಂದ ಗೋವಾ, ಮಹಾರಾಷ್ಟ್ರ ಆಂದ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಎಲ್ಲ ಮಾದರಿಯ ಬಸ್ ಗಳನ್ನು ಮೊದಲಿನ ಸಮಯದಂತೆ ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಕಾರಣಾಂತರಗಳಿಂದ ಬೆಳಗಾವಿ-ಚೆನ್ನೈ ಮಲ್ಟಿ ಎಕ್ಸೆಲ್ ಬಸ್ ಸಂಚಾರವನ್ನು ಪ್ರಾರಂಬಿಸಲಾಗಿಲ್ಲವೆಂದು ವಿಭಾಗಾಧಿಕಾರಿಗಳು ತಿಳಿಸಿದ್ದಾರೆ.

ಈ ಸಾರಿಗೆಗಳಿಗೆ ಇ-ಟಿಕೇಟನ್ನು ಆನ್ ಲೈನ್ ಹಾಗೂ ಮೊಬೈಲ ಮುಖಾಂತರ ಪಡೆಯಬಹುದು.

Related Articles

Leave a Reply

Your email address will not be published. Required fields are marked *

Back to top button
error: Content is protected !!