Belagavi

ರಾಜ್ಯದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ; ಮಹಾರಾಷ್ಟ್ರದ ಮೂವರ ಬಂಧನ

ಬೆಳಗಾವಿ, ೩- ರಾಜ್ಯದಲ್ಲಿ ಗಾಂಜಾ ಮಾರಾಟ ಮಾಡುವ ಮಹಾರಾಷ್ಟ್ರದ ಮೂವರ ತಂಡವೊಂದನ್ನು ಬೆಳಗಾವಿ ಪೊಲೀಸರು ಬಂಧಿಸಿ ಅವರಿಂದ 4 ಲಕ್ಷ ರೂಪಾಯಿ ಮೌಲ್ಯದ 20 ಕೆಜಿ ಗಾಂಜಾ, ಕಾರ್, ಬೈಕ್ ಹಾಗು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಜತ್ ತಾಲೂಕಿನ ರಾವಸಾಹೇಬ್ ಅಣ್ಣಪ್ಪ ನಂದಿವಾಲೆ ಎಂಬ 32 ವರುಷದ ವ್ಯಕ್ತಿ ಗಾಂಜಾ ತೆಗೆದುಕೊಂಡು ಜತ್ ಮೂಲಕ ರಾಜ್ಯದ ಅಥಣಿಗೆ ಬರುತ್ತಿದ್ದಾನೆಂಬ ಮಾಹಿತಿಯನ್ವವ

ಜಿಲ್ಲಾ ಸಿ ಇ ಎನ್ ಅಪರಾಧ (ಡಿಸಿಬಿ) ಪೊಲಿಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ವಿರೇಶ ದೊಡಮನಿ ತಮ್ಮ ತಂಡದೊಂದಿಗೆ ಬಂಧಿಸಿ 40 ಸಾವಿರ ರೂಪಾಯಿ ಮೌಲ್ಯದ ೨ ಕೆಜಿ ಗಾಂಜಾ, ಬೈಕ್ ಹಾಗು ಮೊಬೈಲ್ ಫೋನ್ ವಶಪಡಿಸಿಕೊಂಡು ವಿಚಾರಣೆ ನಡೆಸಿದರು.

ವಿಚಾರಣೆಯಲ್ಲಿ ಆತ ಗಾಂಜಾವನ್ನು ಮಹಾರಾಷ್ಟ್ರ ರಾಜ್ಯದ ಪಂಢರಪೂರದಿಂದ ತಂದಿದ್ದಾಗಿ ಆತ ತಿಳಿಸಿದ.

ಆತ ನೀಡಿದ ಮಾಹಿತಿಯಂತೆ ಮಹಾರಾಷ್ಟ್ರದ ಪಂಢರಪೂರ ಹತ್ತಿರ ಹೋಗಿ
ಸಂಗೀತಾ ದತ್ತಾತ್ರೇಯ ವಾಗಜ ಮತ್ತು ವಿಲಾಸ ಪಾಂಡುರಂಗ ಘಾಡಗೆ ಇವರನ್ನು ಬಂಧಿಸಿ ಅವರಿಂದ 18 ಕೆಜಿ 200 ಗ್ರಾಂ ಗಾಂಜಾ ಮತ್ತು ಮಾರಾಟಕ್ಕೆ ಬಳಸುತ್ತಿದ್ದ ಹೊಂಡಾ ಸಿಟಿ ಕಾರ್, ಗಾಂಜಾ ತೂಕ ಮಾಡಲು ಬಳಸುತ್ತಿದ್ದ ಮಶೀನ ವಶಪಡಿಸಿಕೊಳ್ಳಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!