Madikeri

ರಾಜ್ಯದಲ್ಲಿ ಇದುವರೆಗೆ 1500 ಪೊಲೀಸರಿಗೆ ಸೋಂಕು, 73 ಮಂದಿ ಸಾವು

ಮಡಿಕೇರಿ, ಅ.3 – ರಾಜ್ಯ ಪೊಲೀಸ್ ಇಲಾಖೆಯಲ್ಲಿನ 1,500 ಪೊಲೀಸರಿಗೆ ಈವರೆಗೂ ಕೋರೋನಾ ಸೋಂಕು ತಗುಲಿದ್ದು ಈ ಪೈಕಿ 73 ಮಂದಿ ಸಾವಿಗೀಡಾಗಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾನಿದೇ೯ಶಕ ಪ್ರವೀಣ್ ಸೂದ್ ಹೇಳಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರೋನಾ ಸೋಂಕಿತ ಪೊಲೀಸರಿಗೆ ಮಾನಸಿಕ ಸ್ತೈಯ೯ ನೀಡಲು ತಾನು ರಾಜ್ಯವ್ಯಾಪಿ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮಾದಕ ದ್ರವ್ಯ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಚುರುಕಿನಿಂದ ಸಾಗಿದ್ದು ಚಿತ್ರಕಲಾವಿದರೂ ಸೇರಿದಂತೆ ಡ್ರಗ್ ಜಾಲದಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ನಿಶ್ಚಿತ ಎಂದು ಪ್ರವೀಣ್ ಸೂದ್ ಹೇಳಿದರು.

ಕೋಲಾರ, ರಾಯಚೂರುಗಳಲ್ಲಿಯೂ ಬೆಂಗಳೂರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಿಗಳಿದ್ದಾರೆ. ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಡ್ಗಗ್ ದಂಧೆಕೋರರ ಸದಬಡೆಯುವಿಕೆಗೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಕೊಡಗು ಜಿಲ್ಲೆಯ ಹೋಂಸ್ಟೇ, ರೆಸಾಟ್೯ಗಳಲ್ಲಿ ಮಾದಕ ದ್ರವ್ಯ ಬಳಸಲಾದ ಪಾಟಿ೯ಗಳು ನಡೆದಿದೆಯೇ ಎಂಬ ಬಗ್ಗೆಯೂ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ ಪ್ರಾಕೖತ್ತಿಕ ವಿಕೋಪ ನಿವ೯ಹಣೆಯಲ್ಲಿ ಪೊಲೀಸರು ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ ಉತ್ತಮ ರೀತಿಯಲ್ಲಿ ಕಾಯ೯ನಿವ೯ಹಿಸಿದ್ದಾರೆ. ಕೋರೋನಾ ನಿಯಂತ್ರಣದಲ್ಲಿಯೂ ಕೊಡಗು ಪೊಲೀಸರ ಕಾಯ೯ನಿವ೯ಹಣೆ ಗಮನಾಹ೯ವಾಗಿದೆ. ಕೊಡಗು ಜಿಲ್ಲೆಯ ಪೊಲೀಸರಿಗೆ ವಸತಿ ದುರಸ್ತಿ ಮತ್ತು ವಾಹನ ದುರಸ್ತಿ ಸಂಬಂದಿತ ಅಗತ್ಯ ಸಹಕಾರ ನೀಡಲಾಗುತ್ತದೆ ಎಂದೂ ಅವರು ಭರವಸೆ ನೀಡಿದರು.

Leave a Reply

Your email address will not be published. Required fields are marked *

Back to top button
error: Content is protected !!